ಇಂಗ್ಲೆಂಡ್vs ಪಾಕಿಸ್ತಾನ ಟಿ20: ಮೊದಲ ಚುಟುಕು ಪಂದ್ಯಕ್ಕೆ ಕ್ಷಣಗಣನೆ

ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಚಟುವಟಿಗೆ ಸ್ಥಬ್ಧವಾಗಿ ಪುನಾರಂಭವಾದ ನಂತರ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಇಂದು ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು ಇದರಲ್ಲಿ ಯಾರ ಕೈ ಮೇಲಾಗಲಿದೆ ಎಂಬ ಕುತೂಹಲ ಮೂಡಿಸಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಆರಂಭವಾಗಲಿದ್ದು ಭಾರತದಲ್ಲಿ ಸೋನಿ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.
ಇಂಗ್ಲೆಂಡ್ ತವರಿನಲ್ಲ ನಡೆಯುತ್ತಿರುವ ಈ ಸರಣಿಯಲ್ಲಿ ಗೆದ್ದು ಟೆಸ್ಟ್ ಸರಣಿಯಲ್ಲಿನ ಸೋಲಿಗೆ ತಿರುಗಟು ನೀಡುವ ಉತ್ಸಾಹದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವಿದ್ದರೆ, ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ ಚುಟುಕು ಮಾದರಿಯ ಸರಣಿಯಲ್ಲೂ ಸೊಲ್ಲೆತದಂತೆ ಮಾಡುವ ಭರವಸೆಯಲ್ಲಿದೆ.
ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ವಿರುದ್ಧ ಸತತ ಎರಡು ಟೆಸ್ಟ್ ಸರಣಿಯನ್ನು ಗೆದ್ದಿರುವ ಇಂಗ್ಲೆಂಡ್ ಈ ಮಧ್ಯೆ ಐರ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನೂ ಗೆದ್ದುಕೊಂಡು ಗೆಲುವಿನ ಲಯದಲ್ಲೇ ಮುನ್ನುಗ್ಗುತ್ತಿದೆ. ಚುಟುಕು ಮಾದರಿಯ ನಂಬರ್ 1 ಆಟಗಾರ ಬಾಬರ್ ಅಜಂ ಪಾಕ್ ತಂಡದ ನೇತೃತ್ವ ವಹಿಸಿಕೊಂಡಿದ್ದು ಯುವ ಹಾಗೂ ಅನುಭವಿಗಳ ಮಿಶ್ರತ ತಂಡ ಹೇಗೆ ಸೆಣೆಸಾಟವನ್ನು ನಡೆಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಂಭಾವ್ಯ ತಂಡ ಹೀಗಿದೆ:
ಇಂಗ್ಲೆಂಡ್: ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್ ಮಲನ್, ಇಯಾನ್ ಮಾರ್ಗಾನ್ (ನಾಯಕ), ಟಾಮ್ ಬ್ಯಾಂಟನ್, ಮೊಯೀನ್ ಅಲಿ, ಲೆವಿಸ್ ಗ್ರೆಗೊರಿ, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಟಾಮ್ ಕರ್ರನ್.
ಪಾಕಿಸ್ತಾನ: ಫಖರ್ ಜಮಾನ್, ಹೈದರ್ ಅಲಿ, ಬಾಬರ್ ಅಜಮ್ (ವಿಕೆಟ್ ಕೀಪರ್ ), ಇಫ್ತಿಖರ್ ಅಹ್ಮದ್, ಶೋಯೆಬ್ ಮಲಿಕ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್ (ನಾಯಕ), ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಹಸ್ನೈನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications