ಇಂಗ್ಲೆಂಡ್vs ಪಾಕ್ ಟೆಸ್ಟ್: ಪಾಕಿಸ್ತಾನದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ದಾಂಡಿಗರು ಕಂಗಾಲು

ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಹಿನ್ನೆಡೆಯನ್ನು ಅನುಭವಿಸಿದೆ. ಬೌಲಿಂಗ್ ಬಳಿಕ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ಪಾಕ್ ವೇಗಿಗಳ ದಾಳಿಗೆ ಅಕ್ಷರಶಃ ಕಂಗಾಲಾದಂತೆ ಕಂಡು ಬರುತ್ತಿದೆ. 92 ರನ್‌ಗೆ ತನ್ನ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.
ಇಂಗ್ಲೆಂಡ್ ತನ್ನ ಮೊದಲ ಮೂರು ವಿಕೆಟ್ ಗಳನ್ನು ಕೇವಲ 12 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಆರಂಭಿಕ ಆಟಗಾರರಾದ ರೋರಿ ಬರ್ನ್ಸ್, ಡೋಮಿನಿಕ್ ಸಿಬ್ಲಿ ಜೊತೆಗೆ ಬೆನ್ ಸ್ಟೋಕ್ಸ್ ಶೀಘ್ರವಾಗಿ ಫೆವಿಲಿಯನ್ ಸೇರಿಕೊಂಡರು. ಮೊಹಮದ್ ಅಬ್ಬಾಸ್ 2 ವಿಕೆಟ್ ಕಿತ್ತರೆ ಶಾಹೀನ್ ಅಫ್ರಿದಿ ಹಾಗೂ ಅಸೀಮ್ ಶಾ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ದಾರೆ.
ಇದಕ್ಕೂ ಮುನ್ನ ಪಾಕಿಸ್ತಾನ ಬ್ಯಾಟಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯ್ತು. ಪಾಕಿಸ್ತಾನದ ಆರಂಭಿಕ ಆಟಗಾರ 156 ರನ್‌ಗಳನ್ನು ಗಳಿಸಿ ಮಿಂಚಿದ್ದಾರೆ. ಬಾಬರ್ ಅಜಮ್ 69 ರನ್ ಗಳಿಸಿ ಔಟಾದರೆ ಶಬದ್ ಖಾನ್ 45 ರನ್‌ಗಳ ಕೊಡುಗೆಯನ್ನು ನೀಡಿದರು.
ಮೊದಲ ದಿನ ಬೌಲಿಂಗ್‌ನಲ್ಲಿ ಹಿನ್ನೆಡೆಯನ್ನು ಕಂಡಿದ್ದ ಇಂಗ್ಲೆಂಡ್ ಬೌಲರ್‌ಗಳು ಎರಡನೇ ದಿನ ತಿರುಗಿ ಬೀಳಲು ಯಶಸ್ವಿಯಾಗಿದ್ದರು. ಅದರಲ್ಲೂ ಬ್ರಾಡ್ ಹಾಗೂ ಆರ್ಚರ್ ಪಾಕಿಸ್ತಾನದ ತಲಾ ಮೂರು ವಿಕೆಟ್ ಕಿತ್ತರೆ ಕ್ರಿಸ್ ವೋಕ್ಸ್ 2, ಆಂಡರ್ಸನ್ ಹಾಗೂ ಡೊಮ್ ಬೆಸ್ ತಲಾ 1 ವಿಕೆಟ್ ಪಡೆದರು.
ಇಂದು ಮೂರನೇ ದಿನದಾಟ ನಡೆಯಲಿದ್ದು ಪಾಕಿಸ್ತಾನದ ಬೌಲರ್‌ಗಳನ್ನು ಇಂಗ್ಲೆಂಡ್ ದಾಂಡಿಗರು ಯಾವ ರೀತಿ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆರಂಭದಲ್ಲೇ ಆತಿಥೇಯರಿಗೆ ಆಘಾತವನ್ನು ನೀಡಲು ಯಶಸ್ವಿಯಾಗಿದ್ದು ಪಾಕ್ ಬೌಲಿಂಗ್ ಪಾಳಯಕ್ಕೆ ದೊಡ್ಡ ಉತ್ಸಾಹವನ್ನು ನೀಡುರುವುದಂತು ಸುಳ್ಳಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications