ಇಂಗ್ಲೆಂಡ್vs ಪಾಕಿಸ್ತಾನ 1st ಟೆಸ್ಟ್ Live ಸ್ಕೋರ್: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ದೊರೆತಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದಿದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಇಂಗ್ಲೆಂಡ್‌ನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಪಾಕಿಸ್ತಾನ ತಂಡ ಗೆಲ್ಲುವ ಉತ್ಸಾಹದಲ್ಲಿದೆ.
ಮತ್ತೊಂದೆಡೆ ಇಂಗ್ಲೆಂಡ್ ಕೊರೊನಾ ವೈರಸ್ ಬಳಿಕ ಕ್ರಿಕೆಟ್‌ಗೆ ಚಾಲನೆ ನೀಡಿದ ಮೊದಲ ರಾಷ್ಟ್ರವಾಗಿದ್ದು ಸತತ ಮೂರನೇ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಇಂಗ್ಲೆಂಡ್ ಅದೇ ಪ್ರದರ್ಶನವನ್ನು ಇಂದಿನ ಪಂದ್ಯದಲ್ಲೂ ನೀಡಲು ಉತ್ಸಾಹದಲ್ಲಿದೆ.
ಪಂದ್ಯದ ಸ್ಕೋರ್ ಕಾರ್ಡ್ ಹೀಗಿದೆ:
ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೊರತು ಪಡಿಸಿ ಇಂಗ್ಲೆಂಡ್ ಉಳಿದೆರಡೂ ಪಂದ್ಯಗಳಲ್ಲೂ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಬ್ಯಾಟಿಂಗ್ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚಲು ಇಂಗ್ಲೆಂಡ್ ಪಡೆ ಸಜ್ಜಾಗಿದೆ.
ಪಾಕಿಸ್ತಾನ ಆಡುವ ಬಳಗ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್, ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications