For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ ಟಿ20 LIVE ಸ್ಕೋರ್: ಇಂಗ್ಲೆಂಡ್‌ಗೆ ಕಠಿಣ ಸವಾಲು ನೀಡಿದ ಪಾಕ್

england vs pakistan 2nd t20 live score Manchester

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟಿ20 ಪಂದ್ಯ ಇಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದಿರುವ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಹಾಗೂ ಅನುಭವಿ ಮೊಹಮದ್ ಹಪೀಜ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದ 196 ರನ್‌ಗಳ ಕಠಿಣ ಸವಾಲನ್ನು ಎದುರಾಳಿ ಇಂಗ್ಲೆಂಡ್‌ಗೆ ನೀಡಿದೆ. ಬಾಬರ್ ಅಜಂ ಹಾಗೂ ಮೊಹಮದ್ ಹಫೀಜ್ ತಲಾ ಅರ್ಧ ಶತಕವನ್ನು ಗಳಿಸಿದರು.

ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅನುಭವಿ ಆಟಗಾರ ಮೊಹಮದ್ ಹಫೀಜ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.36 ಎಸೆತಗಳನ್ನು ಎದುರಿಸಿದ ಹಫೀಜ್ ಭರ್ಜರಿ 69 ರನ್ ದಾಖಲಿಸಿದರು. ಈ ಮೂಲಕ ಆತಿಥೇಯ ತಂಡ ಇಂಗ್ಲಂಡ್ ಮೇಲೆ ಒತ್ತಡವನ್ನು ಹೇರಿ ಮೇಲುಗೈ ಸಾಧಿಸುವ ಪ್ರಯತ್ನ ಪಾಕ್ ದಾಂಡಿಗರು ನಡೆಸಿದ್ದಾರೆ.

ಪಂದ್ಯದ Live ಸ್ಕೋರ್ ಪಟ್ಟಿ ಇಲ್ಲಿದೆ:

1
46766

ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾದ ಕಾರಣ ಕ್ರಿಕೆಟ್ ಅಭಿಮಾನಿಗಳು ನಿರಾಸೆಯನ್ನು ಅನುಭವಿಸಿದ್ದಾರೆ. ಹೀಗಾಗಿ ಎರಡನೇ ಪಮದ್ಯದ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು ಯಾರು ಪಂದ್ಯವನ್ನು ಗೆಲ್ಲಲ್ಲಿದ್ದಾರೆ ಎಂಬ ಕುತೂಹಲ ಉಳಿದುಕೊಂಡಿದೆ. ಇಮದಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಳ್ಳುವ ಇರಾದೆಯಲ್ಲಿ ಎರಡೂ ತಂಡಗಳಿವೆ.

ಪಾಕ್ ಆಡುವ ಬಳಗ: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಫ್ತಿಖರ್ ಅಹ್ಮದ್, ಶಾದಾಬ್ ಖಾನ್, ಇಮದ್ ವಾಸಿಮ್, ಮೊಹಮ್ಮದ್ ಅಮೀರ್, ಹರಿಸ್ ರವೂಫ್, ಶಾಹೀನ್ ಅಫ್ರಿದಿ

ಇಂಗ್ಲೆಂಡ್ ಆಡುವ ಬಳಗ: ಟಾಮ್ ಬಾಂಟನ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ಮಲನ್, ಇಯೊನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಲೆವಿಸ್ ಗ್ರೆಗೊರಿ, ಟಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಸಾಕಿಬ್ ಮಹಮೂದ್

Story first published: Monday, August 31, 2020, 10:09 [IST]
Other articles published on Aug 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+