ಇಂಗ್ಲೆಂಡ್ vs ಪಾಕಿಸ್ತಾನ 2ನೇ ಟೆಸ್ಟ್ LIVE ಸ್ಕೋರ್: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ

ಸೌಥಾಂಪ್ಟನ್, ಆಗಸ್ಟ್ 13: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದು ಸೌಥಾಂಪ್ಟನ್‌ನಲ್ಲಿ ಆರಂಭವಾಗಿದೆ. ಟಾಸ್ ಗೆದ್ದಿರುವ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿ ಜೀವಂತವಾಗಿರ ಬೇಕಾದರೆ ಪಾಕ್ ಪಂದ್ಯವನ್ನು ಗೆಲ್ಲಬೇಕಿದೆ.
ಮೊದಲ ಪಂದ್ಯದಲ್ಲಿ ಸಂಪೂರ್ಣ ಪಂದ್ಯ ಪಾಕಿಸ್ತಾನದ ಹಿಡಿತದಲ್ಲೇ ಇತ್ತು. ಆದರೆ ಅಂತಿಮ ಎರಡು ಸೆಶನ್‌ನಲ್ಲಿ ವಿಕೆಟ್ ಪಡೆಯಲು ಪಾಕ್ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ನಾಟಕೀಯ ರೀತಿಯಲ್ಲಿ ಪಂದ್ಯವನ್ನು ಇಂಗ್ಲೆಂಡ್‌ನತ್ತ ವಾಲಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಸ್ಕೋರ್ ಪಟ್ಟಿ ಈ ಕೆಳಗಿನಂತಿದೆ:
ಮತ್ತೊಂದೆಡೆ ತವರಿನಲ್ಲೇ ಸರಣಿ ನಡೆಯುತ್ತಿದ್ದರೂ ಅಲ್ಲಿನ ಲಾಭವನ್ನು ಪಡೆದುಕೊಳ್ಳಲು ಇಂಗ್ಳೀಷ್ ದಾಂಡಿಗರು ಮೊದಲ ಪಂದ್ಯದಲ್ಲಿ ವಿಫಲರಾಗಿದ್ದರು. ಪಾಕ್ ಬೌಲರ್‌ಗಳು ಮೇಲು ಗೈ ಸಾಧಿಸುವಂತೆ ಮಾಡಿದ್ದರು. ಇದು ಪುನರಾವರ್ತನೆಯಾದರೆ ಪಾಕ್ ಈ ಪಂದ್ಯದ ಮೇಲೂ ಹಿಡಿತ ಸಾಧಿಸಲಿದೆ.
ಇಂಗ್ಲೆಂಡ್ ಆಡುವ ಬಳಗ ಹೀಗಿದೆ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಕಾಕ್ ಕ್ರಾಲೆ, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಪಾಕಿಸ್ತಾನ ಆಡುವ ಬಳಗ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications