For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ 2ನೇ ಟೆಸ್ಟ್ LIVE ಸ್ಕೋರ್: ಎರಡನೇ ದಿನದಾಟ ಆರಂಭಕ್ಕೆ ಮಳೆ ಅಡ್ಡಿ

England Vs pakistan 2nd Test Live Score day 2 Southampton

ಸೌಥಾಂಪ್ಟನ್, ಆಗಸ್ಟ್ 14: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುತ್ತಿದೆ. ಎರಡನೇ ದಿನದಾಟಕ್ಕೂ ಮುನ್ನ ಮಳೆ ಸುರಿದಿದ್ದು ಪಂದ್ಯ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ. ಮೊದಲ ದಿನವೂ ಮಳೆ ಸಾಕಷ್ಟು ಅಡ್ಡಿಯುಂಟು ಮಾಡಿತ್ತು.

ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ಮೊದಲ ದಿನದಾಟ ಕೇವಲ 45.4 ಓವರ್‌ಗೆ ಸೀಮಿತವಾಗಿತ್ತು. ಮಳೆ ಹಾಗೂ ಮಂದ ಬೆಳಕು ಪಂದ್ಯಕ್ಕೆ ಅಡ್ಡಿಯುಂಟು ಮಾಡಿತ್ತು. ಮೊದಲ ದಿನದಾಟದಲ್ಲಿ ಪಾಕಿಸ್ತಾನ ತನ್ನ 5 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ.

ಸ್ಕೋರ್ ಪಟ್ಟಿ ಈ ಕೆಳಗಿನಂತಿದೆ:

1
46763

ಪಾಕಿಸ್ತಾನದ ಪರವಾಗಿ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಮುಂದಿವರಿಸುತ್ತಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ 2 ವಿಕೆಟ್ ಕಿತ್ತರೆ ಸ್ಟುವರ್ಟ್ ಬ್ರಾಡ್, ಸ್ಯಾಮ್ ಕರ್ರನ್ ಹಾಗೂ ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ ಹೀಗಿದೆ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಕಾಕ್ ಕ್ರಾಲೆ, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಪಾಕಿಸ್ತಾನ ಆಡುವ ಬಳಗ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ

Story first published: Friday, August 14, 2020, 15:43 [IST]
Other articles published on Aug 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+