
ಸೌಥಾಂಪ್ಟನ್, ಆಗಸ್ಟ್ 17: ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ನೀರಸ ಡ್ರಾಗೊಳ್ಲುವುದು ಖಚಿತವಾಗಿದೆ. ಮಳೆ ಹಾಗೂ ಮಂದಬೆಳಕಿನ ಕಾರಣದಿಂದಾಗಿ ಪಂದ್ಯ ಫಲಿತಾಂಶ ಪಡೆಯದೆ ಡ್ರಾಗೊಳ್ಳುವ ಹಾದಿಯಲ್ಲಿದೆ.
ಪಾಕಿಸ್ತಾನದ ಒಂದು ಇನ್ನಿಂಗ್ಸ್ ಸಂಪೂರ್ಣವಾಗಿದ್ದು ಇಂಗ್ಲೆಂಡ್‌ನ ಮೊದಲನೇ ಇನ್ನಿಂಗ್ಸ್‌ನ ಆಟವಿನ್ನೂ ಬಾಕಿಯಿದೆ. ಇದೇ ಸಂದರ್ಭದಲ್ಲಿ ಅಂತಿಮ ದಿನವೂ ಮಳೆರಾಯ ಆಟಕ್ಕೆ ಅಡ್ಡಿಪಡಿಸುವುದು ಖಚಿತವಾಗಿದೆ. ಹೀಗಾಗಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಸ್ಕೋರ್ ಪಟ್ಟಿ ಈ ಕೆಳಗಿನಂತಿದೆ:
ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 236 ರನ್‌ಗಳನ್ನು ಗಳಸಿದೆ. ಪಾಕ್ ಪರವಾಗಿ ಅಬಿದ್ ಅಲಿ ಹಾಗೂ ರಿಜ್ವಾನ್ ಅರ್ಧ ಶತಕದ ಆಟವನ್ನು ನೀಡಿದರು. ಇಂಗ್ಲೆಂಡ್ ವೇಗಿಗಳಾದ ಸ್ಟುವರ್ಟ್ ಬ್ರಾಡ್ 3 ಹಾಗೂ ಜೇಮ್ಸ್ ಆಂಡರ್ಸನ್ 2 ವಿಕೆಟ್ ಪಡೆದುಕೊಂಡಿದ್ದಾರೆ. ಇಂಗ್ಲಂಡ್ ನಾಲ್ಕನೇ ದಿನದಂತ್ಯಕ್ಕೆ 7ರನ್‌ಗೆ 1 ವಿಕೆಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ಆಡುವ ಬಳಗ ಹೀಗಿದೆ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಕಾಕ್ ಕ್ರಾಲೆ, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಪಾಕಿಸ್ತಾನ ಆಡುವ ಬಳಗ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ