ಪಾಕಿಸ್ತಾನ vs ಇಂಗ್ಲೆಂಡ್ 2ನೇ ಟೆಸ್ಟ್, ಟಾಸ್ ರಿಪೋರ್ಟ್, ಆಡುವ ಬಳಗ ಹಾಗೂ Live ಸ್ಕೋರ್

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಎರಡನೇ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮುಲ್ತಾನ್‌ನಲ್ಲಿ ಈ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪಾಕಿಸ್ತಾನ ಮೊದಲಿಗೆ ಬೌಲಿಂಗ್ ದಾಳಿ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಕೇವಲ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಪಂದ್ಯಕ್ಕೂ ಮುನ್ನದಿನವೇ ನಾಯಕ ಬೆನ್ ಸ್ಟೋಕ್ಸ್ ತಂಡದ ಆಡುವ ಬಳಗದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಮೊದಲ ಪಂದ್ಯದಲ್ಲಿ ಆಡಿದ್ದ ಲಿಯಾಮ್ ಲಿವಿಂಗ್‌ಸ್ಟನ್ ಗಾಯದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನದಲ್ಲಿ ಮಾರ್ಕ್ ವುಡ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ಪಾಕಿಸ್ತಾನ ತಂಡ ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿಕೊಂಡಿದೆ. ಅಜರ್ ಅಲಿ, ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಆಡುವ ಬಳಗದಿಂದ ಹೊರಗುಳಿದಿದ್ದು ಮೊಹಮ್ಮದ್ ಸವಾಜ್, ಪಹೀಮ್ ಅಶ್ರಫ್ ಹಾಗೂ ಅಬ್ರಾರ್ ಅಹ್ಮದ್‌ಗೆ ಅವಕಾಶ ದೊರೆತಿದೆ.
Live ಸ್ಕೋರ್ ಕಾರ್ಡ್ ಹೀಗಿದೆ
ಇನ್ನು ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆಯ ಆಟವಾಡಿದ್ದು ಈ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿತ್ತು. ಹೀಗಾಗಿ ಸರಣಿಯಲ್ಲಿ 1-0 ಅಂತರದಿಂದ ಇಂಗ್ಲೆಂಡ್ ಮುನ್ನಡೆ ಸಾಧಿಸಿದ್ದ ಮುಲ್ತಾನ್ ಟೆಸ್ಟ್‌ನಲ್ಲಿಯೂ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದೆ. ಮೊದಲ ಟೆಸ್ಟ್‌ನಲ್ಲಿ ಆಡಿದ ಆಕ್ರಮಣಕಾರಿ ಆಟವನ್ನೇ ಪ್ರದರ್ಶಿಸುವ ಉತ್ಸುಕತೆಯಲ್ಲಿದೆ ಇಂಗ್ಲೆಂಡ್ ಪಡೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಜಾಹಿದ್ ಮಹಮೂದ್, ಮೊಹಮ್ಮದ್ ಅಲಿ, ಅಬ್ರಾರ್ ಅಹಮದ್
ಬೆಂಚ್: ಅಜರ್ ಅಲಿ, ನಸೀಮ್ ಶಾ, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ವಿಲ್ ಜ್ಯಾಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್
ಬೆಂಚ್: ಕೀಟನ್ ಜೆನ್ನಿಂಗ್ಸ್, ರೆಹಾನ್ ಅಹ್ಮದ್, ಬೆನ್ ಫೋಕ್ಸ್, ಜೇಮೀ ಓವರ್ಟನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications