For Quick Alerts
ALLOW NOTIFICATIONS  
For Daily Alerts
 

ಹಫೀಝ್ ಬ್ಯಾಟಿಂಗ್‌ಗೆ ತಲೆ ಬಾಗಿದ ಇಂಗ್ಲೆಂಡ್, ಟಿ20ಐ ಸರಣಿ ಸಮಬಲ

England vs Pakistan, 3rd T20I - Live Score

ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ vs ಪಾಕಿಸ್ತಾನ ನಡುವಿನ 3ನೇ ಮತ್ತು ಕೊನೇಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ 5 ರನ್ ಗೆಲುನ್ನಾಚರಿಸಿದೆ. ಮೊಹಮ್ಮದ್ ಹಫೀಝ್ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನದಿಂದ ನಾಯಕ ಬಾಬರ್ ಅಝಾಮ್ 21, ಹೈದರ್ ಅಲಿ 54 (33 ಎಸೆತ), ಮೊಹಮ್ಮದ್ ಹಫೀಝ್ 86 (52), ಶದಾಬ್ ಖಾನ್ 15 ರನ್ ಕೊಡುಗೆ ಗಮನಾರ್ಹವೆನಿಸಿತು. ಪಾಕ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತ್ತು.

ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟಿ20ಐ ಪಂದ್ಯ, ಸ್ಕೋರ್‌ಕಾರ್ಡ್

1
46767

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ನಿಂದ ಟಾಮ್ ಬ್ಯಾಂಟನ್ 46 (31 ಎಸೆತ), ಇಯಾನ್ ಮಾರ್ಗನ್ 10, ಮೊಯೀನ್ ಅಲಿ 61 (33), ಸ್ಯಾಮ್ ಬಿಲ್ಲಿಂಗ್ಸ್ 26, ಲೂಯಿಸ್ ಗ್ರೆಗರಿ 26, ಟಾಮ್ ಕರನ್ 8 ರನ್ ಸೇರಿಸಿದರು. ಇಂಗ್ಲೆಂಡ್ 20 ಓವರ್‌ಗೆ 8 ವಿಕೆಟ್ ಕಳೆದು 158 ರನ್ ಗಳಿಸಲಷ್ಟೇ ಶಕ್ತವಾಯ್ತು.

ಪಾಕ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಶಾಹೀನ್ ಅಫ್ರಿದಿ ಮತ್ತು ವಹಾಬ್ ರಿಯಾಝ್ ತಲಾ 2 ವಿಕೆಟ್‌ನೊಂದಿಗೆ ಗಮನ ಸೆಳೆದರು. ಮೊಹಮ್ಮದ್ ಹಫೀಝ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇಂಗ್ಲೆಂಡ್ ತಂಡ: ಟಾಮ್ ಬ್ಯಾಂಟನ್, ಜಾನಿ ಬೈರ್‌ಸ್ಟೋವ್ (ವಿಕೆ), ಡೇವಿಡ್ ಮಲನ್, ಇಯಾನ್ ಮಾರ್ಗನ್ (ಸಿ), ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲೆವಿಸ್ ಗ್ರೆಗೊರಿ, ಟಾಮ್ ಕರನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಸಾಕಿಬ್ ಮಹಮೂದ್.

ಪಾಕಿಸ್ತಾನ ತಂಡ: ಬಾಬರ್ ಅಝಾಮ್ (ಸಿ), ಫಖರ್ ಜಮಾನ್, ಹೈದರ್ ಅಲಿ, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಸರ್ಫರಾಜ್ ಅಹ್ಮದ್ (ವಿಕೆ), ಶದಾಬ್ ಖಾನ್, ಇಮಾದ್ ವಾಸಿಮ್, ವಹಾಬ್ ರಿಯಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.

Story first published: Wednesday, September 2, 2020, 9:56 [IST]
Other articles published on Sep 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+