ಇಂಗ್ಲೆಂಡ್ vs ಪಾಕಿಸ್ತಾನ: 3ನೇ ಟಿ20 ಪಂದ್ಯ, ಟಾಸ್ ರಿಪೋರ್ಟ್ ಹಾಗೂ ಪ್ಲೇಯಿಂಗ್ XI

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟಿ210 ಸರಣಿಯ ಮೂರನೇ ಪಂದ್ಯ ಇಂದು ಕರಾಚಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಇಂಗ್ಲೆಂಡ್ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಏಳು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ಸೋಲು ಗೆಲುವಿನ ರುಚಿ ಕಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ಸೋಲಿನ ರುಚಿ ತೋರಿಸಿದ್ದರೆ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಾಖಲೆಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಈ ಸರಣಿಯಲ್ಲಿ ಎರಡು ತಂಡಗಳು ಕೂಡ 1-1 ಅಂತರದಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.
Live ಸ್ಕೋರ್ ಹೀಗಿದೆ

ದಾಖಲೆಯ ಗೆಲುವು ಸಾಧಿಸಿದ ಪಾಕಿಸ್ತಾನ
ಈ ಸರಣಿಯ ಎರಡನೇ ಪಂದ್ಯ ಕೂಡ ಕರಾಚಿಯಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ವಿಶ್ವ ದಾಖಲೆಯ ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 200 ರನ್‌ಗಳ ಬೃಹತ್ ಗುರಿಯನ್ನು ಪಾಕಿಸ್ತಾನ ತಂಡಕ್ಕೆ ನೀಡಿತ್ತು. ನಾಯಕ ಮೊಯೀನ್ ಖಾನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದರು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಪರವಾಗಿ ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ಅಮೋಘ ಪ್ರದರ್ಶನ ನೀಡುವ ಮೂಲಕ ವಿಕೆಟ್ ಕಳೆದುಕೊಳ್ಳದೆಯೇ ಈ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿತ್ತು.

ಪಾಕಿಸ್ತಾನ ಆಡುವ ಬಳಗ
ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಹೈದರ್ ಅಲಿ, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಹನವಾಜ್ ದಹಾನಿ, ಮೊಹಮ್ಮದ್ ಹಸ್ನೇನ್, ಹಾರಿಸ್ ರೌಫ್, ಉಸ್ಮಾನ್ ಖಾದಿರ್
ಬೆಂಚ್: ನಸೀಮ್ ಶಾ, ಮೊಹಮ್ಮದ್ ವಾಸಿಂ ಜೂನಿಯರ್, ಆಸಿಫ್ ಅಲಿ, ಶಾದಾಬ್ ಖಾನ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್, ಅಮೀರ್ ಜಮಾಲ್

ಇಂಗ್ಲೆಂಡ್ ಆಡುವ ಬಳಗ
ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ (ನಾಯಕ), ಸ್ಯಾಮ್ ಕುರಾನ್, ಲಿಯಾಮ್ ಡಾಸನ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋಪ್ಲಿ
ಬೆಂಚ್: ಅಲೆಕ್ಸ್ ಹೇಲ್ಸ್, ಡೇವಿಡ್ ವಿಲ್ಲಿ, ಲ್ಯೂಕ್ ವುಡ್, ರಿಚರ್ಡ್ ಗ್ಲೀಸನ್, ಓಲಿ ಸ್ಟೋನ್, ಜೋರ್ಡಾನ್ ಕಾಕ್ಸ್, ಟಾಮ್ ಹೆಲ್ಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications