For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನಕ್ಕೆ ವರುಣನ ಕೃಪೆ: ಇಂಗ್ಲೆಂಡ್ vs ಪಾಕ್ 3ನೇ ಟೆಸ್ಟ್ ಪಂದ್ಯ ಡ್ರಾ

England vs Pakistan, 3rd Test, Day 5 - Live Score

ಸೌತಾಂಪ್ಟನ್: ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 25) ಮುಕ್ತಾಯಗೊಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ಡ್ರಾಗೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ 1-0ಯಿಂದ ಇಂಗ್ಲೆಂಡ್ ವಶವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ, ಡೊಮಿನಿಕ್ ಸಿಬ್ಲಿ 22, ಝ್ಯಾಕ್ ಕ್ರಾಲೆ 267, ಜೋ ರೂಟ್ 29, ಜೋಸ್ ಬಟ್ಲರ್ 152, ಕ್ರಿಸ್ ವೋಕ್ಸ್ 40, ಡಾಮ್ ಬೆಸ್ 27, ಸ್ಟುವರ್ಟ್ ಬ್ರಾಡ್ 15 ರನ್‌ನೊಂದಿಗೆ 154.4 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 583 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.

ಇಂಗ್ಲೆಂಡ್ vs ಪಾಕಿಸ್ತಾನ, 3ನೇ ಟೆಸ್ಟ್ ಪಂದ್ಯ, ಸ್ಕೋರ್‌ಕಾರ್ಡ್

1
46764

ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಅಝರ್ ಅಲಿ ಅಜೇಯ 141, ಫವಾದ್ ಆಲಂ 21, ಮೊಹಮ್ಮದ್ ರಿಜ್ವಾನ್ 53, ಯಾಸಿರ್ ಶಾ 20 ರನ್‌ನೊಂದಿಗೆ 93 ಓವರ್‌ಗೆ 273 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು. ಪಾಕಿಸ್ತಾನಕ್ಕೆ ಇಂಗ್ಲೆಂಡ್ ಫಾಲೋ ಆನ್ ನೀಡಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಪಾಕಿಸ್ತಾನ ಅಂಥ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಶಾನ್ ಮಸೂದ್ 18, ಅಬಿದ್ ಅಲಿ 42, ಬಾಬರ್ ಅಝಾಮ್ ಅಜೇಯ 63, ನಾಯಕ ಅಝರ್ ಅಲಿ 31, ಅಸಾದ್ ಶಫಿಕ್ 21 ರನ್‌ನೊಂದಿಗೆ ಪಾಕ್ 83.1ನೇ ಓವರ್‌ಗೆ 4 ವಿಕೆಟ್ ಕಳೆದು 187 ರನ್ ಬಾರಿಸಿತು. 3ನೇ ಟೆಸ್ಟ್‌ಗೆ ಮಳೆ ಪದೆ ಪದೆ ಅಡ್ಡಿಪಡಿಸಿದ್ದರಿಂದ ಪಾಕ್‌ಗೆ ಅನುಕೂಲವಾಗಿದೆ. ಪಂದ್ಯ ಡ್ರಾ ಎನಿಸಲ್ಪಟ್ಟಿದೆ.

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜೋ ರೂಟ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಝಾಮ್, ಅಸಾದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.

Story first published: Tuesday, August 25, 2020, 23:00 [IST]
Other articles published on Aug 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+