ಇಂಗ್ಲೆಂಡ್ vs ಪಾಕಿಸ್ತಾನ ಅಂತಿಮ ಟೆಸ್ಟ್ LIVE ಸ್ಕೋರ್: ಸಂಕಷ್ಟದಲ್ಲಿ ಪಾಕಿಸ್ತಾನ

ಸೌಥಾಂಪ್ಟನ್, ಆಗಸ್ಟ್ 23: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಇಂಗ್ಲೆಂಡ್ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನದ ನಂತರ ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲೂ ಭರ್ಜರಿ ಯಶಸ್ಸು ಪಡೆದುಕೊಂಡಿದೆ.
2ನೇ ದಿನದಂತ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು 24 ರನ್ ಗಳಿಸಲಷ್ಟೇ ಶಕ್ತವಾಗಿದೆ. ಇಂಗ್ಲೆಂಡ್ ಪರವಾಗಿ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಮೂರೂ ವಿಕೆಟ್‌ಗಳನ್ನೂ ತಮ್ಮ ತೆಕ್ಕೆಗೇ ಹಾಕಿಕೊಂಡಿದ್ದಾರೆ.
LIVE ಸ್ಕೋರ್ ಪಟ್ಟಿ ಹೀಗಿದೆ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಜ್ಯಾಕ್ ಕ್ರಾವ್ಲಿ ಹಾಗೂ ಜೋಸ್ ಬಟ್ಲರ್ ಭರ್ಜರಿ ಆಟದ ಸಹಯಾದಿಂದ ಬರೊಬ್ಬರಿ 583/8 ರನ್ ಗಳಿಸಿತು. ಕ್ರಾವ್ಲಿ 267 ರನ್ ಗಳಿಸಿದರೆ ಜೋಸ್ ಬಟ್ಲರ್ 152 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.
ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜೋ ರೂಟ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್
ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಜಮ್, ಅಸಾದ್ ಶಫಿಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆ), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications