Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ ವಿರುದ್ಧದ ಸರಣಿಗೆ ಹೊಸ ತಂಡ ಪ್ರಕಟಿಸಿದ ಇಂಗ್ಲೆಂಡ್

England vs Pakistan: England name new squad after COVID-19 cases

ಲಂಡನ್: ಪಾಕಿಸ್ತಾನ ವಿರುದ್ಧದ ನಿಯಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ಹೊಸ ತಂಡವನ್ನೇ ಇಂಗ್ಲೆಂಡ್ ಮಂಗಳವಾರ (ಜುಲೈ 6) ಹೆಸರಿಸಿದೆ.

ಇಂಗ್ಲೆಂಡ್‌ ಕ್ರಿಕೆಟ್ ತಂಡದಲ್ಲಿ 3 ಆಟಗಾರರು ಮತ್ತು 4 ಜನ ಸಿಬ್ಬಂದಿಗೆ ಕೋವಿಡ್-19 ಸೋಂಕು ತಗುಲಿತ್ತು. ಹೀಗಾಗಿ ಇಂಗ್ಲೆಂಡ್‌ ಹೊಸ ತಂಡ ಪ್ರಕಟಿಸಿದೆ. ಇಂಗ್ಲೆಂಡ್-ಪಾಕಿಸ್ತಾನ ಸರಣಿಗಳು ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ.

ಜುಲೈ 8ರಿಂದ ಏಕದಿನ ಸರಣಿಯ ಮೂಲಕ ಪಾಕ್-ಇಂಗ್ಲೆಂಡ್ ಸರಣಿ ಆರಂಭಗೊಳ್ಳಲಿದೆ. ಸರಣಿ ಆರಂಭಕ್ಕೆ 2 ದಿನ ಮುಂಚಿತವಾಗಿ 18 ಮಂದಿಯ ಹೊಸ ತಂಡ ಪ್ರಕಟಿಸಿರುವ ಇಂಗ್ಲೆಂಡ್, ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ನಾಯಕರನ್ನಾಗಿ ಹೆಸರಿಸಿದೆ. ಈ ತಂಡದಲ್ಲಿ 9 ಮಂದಿ ಅನ್‌ಕ್ಯಾಪ್ಟ್ ಆಟಗಾರರಿದ್ದಾರೆ.

ಪಾಕ್ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ಜೇಕ್ ಬಾಲ್, ಡ್ಯಾನಿ ಬ್ರಿಗ್ಸ್, ಬ್ರೈಡಾನ್ ಕಾರ್ಸ್, ಝ್ಯಾಕ್ ಕ್ರಾಲೆ, ಬೆನ್ ಡಕೆಟ್, ಲೆವಿಸ್ ಗ್ರೆಗೊರಿ, ಟಾಮ್ ಹೆಲ್ಮ್, ವಿಲ್ ಜ್ಯಾಕ್ಸ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಕ್ರೇಗ್ ಒವರ್ಟನ್, ಮ್ಯಾಟ್ ಪಾರ್ಕಿನ್ಸನ್, ಡೇವಿಡ್ ಪೇನ್, ಫಿಲ್ ಸಾಲ್ಟ್ , ಜಾನ್ ಸಿಂಪ್ಸನ್, ಜೇಮ್ಸ್ ವಿನ್ಸ್.

Story first published: Tuesday, July 6, 2021, 17:42 [IST]
Other articles published on Jul 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+