ಇಂಗ್ಲೆಂಡ್ vs ಪಾಕಿಸ್ತಾನ ಪ್ರಥಮ ಟೆಸ್ಟ್: ಮೊದಲ ದಿನ ಉತ್ತಮ ಸ್ಥಿತಿಯಲ್ಲಿ ಪಾಕಿಸ್ತಾನ

ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವಿನ ಸರಣಿಯಲ್ಲಿ ಮೊದಲ ದಿನ ಆರಂಭಿಕ ಕುಸಿತದ ಮಧ್ಯೆಯೂ ಪಾಕಿಸ್ತಾನ ಉತ್ತಮ ಸ್ಥಿತಿಯಲ್ಲಿದೆ. ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಮ್ ಆಸರೆಯಾಗಿದ್ದು ಕುಸಿತದ ಭೀತಿಯಲ್ಲಿದ್ದ ತಂಡವನ್ನು ಪಾರು ಮಾಡಿದ್ದಾರೆ.
ಪಂದ್ಯದ ಮೊದಲ ದಿನ ಮಳೆ ಅಡ್ಡಿಯುಂಟು ಮಾಡಿದೆ. ಕೇವಲ 49 ಓವರ್‌ಗಳ ಪಂದ್ಯ ಮಾತ್ರವೇ ನಡೆದಿದ್ದು ಪಾಕಿಸ್ತಾನ 139 ರ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ಬಾಬರ್ ಅಜಮ್ 69 ರನ್ ಗಳಿಸಿ ಆಟ ಮುಂದುವರಿಸಿದ್ದರೆ ಶಾನ್ ಮಸೂದ್ ಅಜಮ್‌ಗೆ ಉತ್ತಮ ಸಾಥ್ ನೀಡುತ್ತಿದ್ದು 46 ರನ್ ಗಳಿಸಿದ್ದಾರೆ.
ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಅಬಿದ್ ಅಲಿ ಹಾಗೂ ನಾಯಕ ಅಜರ್ ಅಲಿ ತಮ್ಮ ವಿಕೆಟ್ ಕಳೆದುಕೊಂಡಿದ್ದಾರೆ. 16 ರನ್ ಗಳಿಸಿದ ಅಬಿದ್ ಜೋಫ್ರಾ ಆರ್ಚರ್‌ಗೆ ಬೌಲ್ಡ್ ಆಗಿದ್ದರೆ ಅಜರ್ ಅಲಿ ಕ್ರಿಸ್ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಸರಣಿಯಲ್ಲಿ ಪಾಕಿಸ್ತಾನ ಮೊದಲ ದಿನ ಅದ್ಭುತ ಪ್ರದರ್ಶನವನ್ನು ನೀಡಿದ್ದು ಇಂಗ್ಲೆಂಡ್ ನೆಲದಲ್ಲಿ ಆತಿಥೇಯರಿಗೆ ತಿರುಗೇಟು ನೀಡುವ ಲಕ್ಷಣಗಳು ಕಾಣಿಸುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿ ಗೆದ್ದು ಬೀಗಿತ್ತು. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತು ಬಳಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆದ್ದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications