ಇಂಗ್ಲೆಂಡ್ vs ಪಾಕ್: ಇಂಗ್ಲೆಂಡ್‌ನ ಝ್ಯಾಕ್ ಕ್ರಾಲೆ ಚೊಚ್ಚಲ ಟೆಸ್ಟ್ ಶತಕ

ಸೌತಾಂಪ್ಟನ್: ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಝ್ಯಾಕ್ ಕ್ರಾಲೆ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಶತಕ ಬಾರಿಸಿದ್ದಾರೆ. ಸೌತಾಂಪ್ಟನ್ ರೋಸ್‌ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಮೂರನೇ ಮತ್ತು ಕೊನೇಯ ಟೆಸ್ಟ್‌ನ ಮೊದಲನೇ ದಿನದಾಟದಲ್ಲಿ ಕ್ರಾಲೆ 269 ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್ 6, ಡೊಮಿನಿಕ್ ಸಿಬ್ಲಿ 22 ರನ್ ಬಾರಿಸಿ ಬೇಗನೆ ವಿಕೆಟ್ ಒಪ್ಪಿಸಿದರು. ಅನಂತರ ಬಂದ ನಾಯಕ ಜೋ ರೂಟ್ 29, ಆಲ್ಲಿ ಪೋಪ್ 3 ರನ್‌ಗೆ ನಿರ್ಗಮಿಸಿದರು.
ಆದರೆ 22ರ ಹರೆಯದ ಕ್ರಾಲೆ ಶತಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರ ಅಜೇಯ ಅರ್ಧ ಶತಕ (87 ರನ್) ಇಂಗ್ಲೆಂಡ್ ತಂಡಕ್ಕೆ ರನ್ ಬಲ ತುಂಬಿದೆ. ಶುಕ್ರವಾರ ಮೊದಲನೇ ದಿನದಾಟ ಮುಕ್ತಾಯದ ವೇಳೆ ಇಂಗ್ಲೆಂಡ್ 90 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 332 ರನ್ ಗಳಿಸಿತ್ತು.
ಇದು 8ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕ್ರಾಲೆ 485* ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 3 ಅರ್ಧ ಶತಕಗಳು ಸೇರಿವೆ. ಕೆಂಟ್ ಕೌಂಟಿ ಕ್ರಿಕೆಟ್ ತಂಡದ ಪರ ಆಡುವ ಝ್ಯಾಕ್ 2018ರಲ್ಲಿ 168, 2019ರಲ್ಲಿ 108, 2019ರಲ್ಲಿ 111 ರನ್ ಹೀಗೆ ಮೂರು ಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications