ಸೌತಾಂಪ್ಟನ್, ಜುಲೈ 11: ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ ಆತಿಥೇಯರ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಕ್ರೇಗ್ ಬ್ರಾಥ್ವೇಟ್, ಶೇನ್ ಡೌರಿಚ್ ಅರ್ಧ ಶತಕದೊಂದಿಗೆ ಮೊದಲ ಇನ್ನಿಂಗ್ಸ್ ವೆಸ್ಟ್ ಇಂಡೀಸ್ ತಂಡ ಮುನ್ನಡೆ ಸಾಧಿಸಿತ್ತು. ಬೆನ್ ಸ್ಟೋಕ್ಸ್ ಬಳಗವೀಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.
ವಾರ್ನರ್ or ರೋಹಿತ್: ತನ್ನ ನೆಚ್ಚಿನ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ರಾಯ್
ಅಂತಿಮ ಇನ್ನಿಂಗ್ಸ್ ಆಡುತ್ತಿರುವ ಇಂಗ್ಲೆಂಡ್ನಿಂದ ರೋರಿ ಬರ್ನ್ಸ್ 42, ಡೊಮಿನಿಕ್ ಸಿಬ್ಲಿ 50, ಜೋ ಡೆನ್ಲಿ 29, ಝಾಕ್ ಕ್ರಾಲೆ 76, ನಾಯಕ ಬೆನ್ ಸ್ಟೋಕ್ಸ್ 46 ರನ್ ಬಾರಿಸಿ ನಿರ್ಗಮಿಸಿದ್ದಾರೆ.
ಸೌತಾಂಪ್ಟನ್ನ ರೋಸ್ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್, ರೋರಿ ಬರ್ನ್ಸ್ 30, ಬೆನ್ ಸ್ಟೋಕ್ಸ್ 43, ನಾಯಕ ಜೋಸ್ ಬಟ್ಲರ್ 35, ಡೊಮಿನಿಕ್ ಬೆಸ್ 31 ರನ್ನೊಂದಿಗೆ 67.3 ಓವರ್ಗೆ ಎಲ್ಲಾ ವಿಕೆಟ್ 204 ರನ್ ಗಳಿಸಿತ್ತು.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್ಕಾರ್ಡ್
ಮೊದಲ ಇನ್ನಿಂಗ್ಸ್ನಲ್ಲಿ ಕೆರಿಬಿಯನ್ ತಂಡ, ಕ್ರೇಗ್ ಬ್ರಾಥ್ವೇಟ್ 65, ಜಾನ್ ಕ್ಯಾಂಪ್ಬೆಲ್ 28, ಶೈ ಹೋಪ್ 16, ಶಮರ್ ಬ್ರೂಕ್ಸ್ 39, ಜೆರ್ಮೈನ್ ಬ್ಲ್ಯಾಕ್ವುಡ್ 12, ರೋಸ್ಟನ್ ಚೇಸ್ 47, ಜೇಸನ್ ಹೋಲ್ಡರ್ 5, ಶೇನ್ ಡೌರಿಚ್ 61 ರನ್ ಕೊಡುಗೆಯೊಂದಿಗೆ 102 ಓವರ್ನಲ್ಲಿ 318 ರನ್ ಬಾರಿಸಿ 114 ರನ್ ಮುನ್ನಡೆ ಸಾಧಿಸಿತ್ತು.
ರಗ್ಬಿ ಆಟಗಾರ ಸೋಲಿಯೊಲಾ ಮುಖದ ಒಳಗಿದೆ ಬರೋಬ್ಬರಿ 20 ಸ್ಕ್ರೂಗಳು!
ಇಂಗ್ಲೆಂಡ್ ತಂಡ: ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ಡೆನ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆ್ಯಂಡರ್ಸನ್.
ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶಿಷ್ಠ ದಾಖಲೆ
ವೆಸ್ಟ್ ಇಂಡೀಸ್ ತಂಡ: ಜಾನ್ ಕ್ಯಾಂಪ್ಬೆಲ್, ಕ್ರೇಗ್ ಬ್ರಾಥ್ವೈಟ್, ಶಮರ್ ಬ್ರೂಕ್ಸ್, ಶೈ ಹೋಪ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್ವುಡ್, ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.