ತವರಿನಲ್ಲೇ ಇಂಗ್ಲೆಂಡ್‌ಗೆ ಶಾಕ್: 4 ವಿಕೆಟ್‌ಗಳ ಸೋಲುಣಿಸಿದ ವೆಸ್ಟ್‌ಇಂಡೀಸ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಇಂಗ್ಲೆಂಡ್‌ಗೆ ಅದರದ್ದೇ ನೆಲದಲ್ಲಿ ಸೋಲಿನ ರುಚಿ ತೋರಿಸಿ ವೆಸ್ಟ್ ಇಂಡೀಸ್ ತಂಡ. ಪಂದ್ಯದ ಮೇಲೆ ಆರಂಭದಿಂದಲೂ ಬಿಗಿ ಹಿಡಿತ ಹೊಂದಿದ್ದ ವೆಸ್ಟ್ ಇಂಡೀಸ್ ಅದನ್ನು ಫಲಿತಾಂಶವಾಗಿ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಗೆಲ್ಲಲು 200 ರನ್‌ಗಳ ಗುರಿಯನ್ನು ಇಂಗ್ಲೆಂಡ್ ನೀಡಿತ್ತು. ಈ ಗುರಿಯನ್ನು ವೆಸ್ಟ್ ಇಂಡೀಸ್ 6 ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇಂಗ್ಲೆಂಡ್ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟರು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಇಂದು ಆರಂಭದಲ್ಲಿ ಆಘಾತಕ್ಕೆ ಒಳಗಾಗಿತ್ತು. ಒಂದು ಹಂತದಲ್ಲಿ ವಿಂಡೀಸ್ ಪಂದ್ಯವನ್ನು ಕಳೆದುಕೊಳ್ಳುವ ಆತಂಕಕ್ಕೂ ಒಳಗಾಗಿತ್ತು. ಆದರೆ ಜರ್ಮೇನ್ ಬ್ಲಾಕ್‌ವುಡ್ ಅವರ ಸಮಯೋಚಿತ ಆಟದಿಂದಾಗಿ ವೆಸ್ಟ್ ಇಂಡೀಸ್ ಪಂದ್ಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಇಂಗ್ಲೆಂಡ್ ತಂಡ: ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ಡೆನ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್ (ಸಿ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆ್ಯಂಡರ್ಸನ್.
ವೆಸ್ಟ್ ಇಂಡೀಸ್ ತಂಡ: ಜಾನ್ ಕ್ಯಾಂಪ್ಬೆಲ್, ಕ್ರೇಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಶೈ ಹೋಪ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications