For Quick Alerts
ALLOW NOTIFICATIONS  
For Daily Alerts
 

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

England vs West Indies 1st Test match live streaming and timing detail

ಲಂಡನ್: ಕೊರೊನಾವೈರಸ್‌ನಿಂದಾಗಿ ನಿಲುಗಡೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಜುಲೈ 8ರಿಂದ ಪುನರಾರಂಭಗೊಳ್ಳಲಿದೆ. ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ, ಕೊರೊನಾ ಬಳಿಕ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಸರಣಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಜುಲೈ 8ರಿಂದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಕೊರೊನಾ ಭೀತಿಯ ಬಳಿಕ ಕ್ರಿಕೆಟ್ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇನ್ಮುಂದೆ ಕ್ರಿಕೆಟ್‌ ಪಂದ್ಯಗಳ ವೇಳೆ ಆಟಗಾರರು ಚೆಂಡಿಗೆ ಎಂಜಲು ಸವರುವಂತಿಲ್ಲ. ಅಂಪೈರ್‌ಗಳು ಆಟಗಾರರನ್ನು ಗಮನಿಸುತ್ತಿರಲಿದ್ದಾರೆ. ಟೆಸ್ಟ್ ಸರಣಿಗಾಗಿ ಸಜ್ಜಾಗಿರುವ ಎರಡೂ ತಂಡದ ಆಟಗಾರರ ಕೊರೊನಾ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ.

ಕೆಲ ತಿಂಗಳ ಬಳಿಕ ಆರಂಭಗೊಳ್ಳುತ್ತಿರುವ ಮೊದಲ ಕುತೂಹಲಕಾರಿ ಕ್ರಿಕೆಟ್ ಪಂದ್ಯದ ಸಮಯ, ಎರಡೂ ತಂಡಗಳ ಆಟಗಾರರು, ನೇರಪ್ರಸಾರಗೊಳ್ಳುವ ಮಾಧ್ಯಮ ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಟೆಸ್ಟ್ ಆರಂಭಗೊಳ್ಳುವ ಸಮಯ

ಟೆಸ್ಟ್ ಆರಂಭಗೊಳ್ಳುವ ಸಮಯ

ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಜುಲೈ 8ರಿಂದ ಆರಂಭಗೊಳ್ಳುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ 3:30 PMರ ವೇಳೆಗೆ ಶುರುವಾಗಲಿದೆ. ದ್ವಿತೀಯ ಟೆಸ್ಟ್ ಜುಲೈ 16ರಿಂದ ಮ್ಯಾನ್ಚೆಸ್ಟರ್‌ನ ಓಲ್ಡ್ ಎಮಿರೇಟ್ಸ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ, 3ನೇ ಪಂದ್ಯ ಜುಲೈ 24ರಂದು ಮ್ಯಾನ್ಚೆಸ್ಟರ್‌ ಸ್ಟೇಡಿಯಂನಲ್ಲೇ ಆರಂಭಗೊಳ್ಳಲಿದೆ.

ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಝಕ್ ಕ್ರಾಲೆ, ಜೋ ಡೆನ್ಲಿ, ಆಲ್ಲಿ ಪೋಪ್, ಡೊಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ನೇರಪ್ರಸಾರ ಯಾವುದರಲ್ಲಿ?

ನೇರಪ್ರಸಾರ ಯಾವುದರಲ್ಲಿ?

ಇಂಗ್ಲೆಂಡ್-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯ ಮತ್ತು ಉಳಿದ ಪಂದ್ಯಗಳನ್ನು ಸೋನಿ ನೆಟ್ವರ್ಕ್ಸ್‌ ನೇರಪ್ರಸಾರಗೊಳಿಸಲಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್‌ಡಿ, ಸೋನಿ ಟೆನ್ ಸ್ಪೋರ್ಟ್ಸ್ 1, ಸೋನಿ ಟೆನ್ ಸ್ಪೋರ್ಟ್ಸ್ 1 ಎಚ್‌ಡಿ ಚಾನೆಲ್‌ಗಳಲ್ಲಿ ನೀವು ಲೈವ್ ಪಂದ್ಯ ವೀಕ್ಷಿಸಬಹುದು. ಜಾಲತಾಣವಾದರೆ ಸೋನಿಲೈವ್ (Sonyliv)ನಲ್ಲಿ ನೇರಪ್ರಸಾರ ಲಭ್ಯವಿದೆ. ಮೈಖೇಲ್ ಕನ್ನಡದಲ್ಲೂ ನೀವು ಲೈವ್ ಸ್ಕೋರ್‌ಕಾರ್ಡ್ ವೀಕ್ಷಿಸಬಹುದು.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ

ವೆಸ್ಟ್ ಇಂಡೀಸ್ ಟೆಸ್ಟ್ ತಂಡ

ಜೇಸನ್ ಹೋಲ್ಡರ್ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್, ಕ್ರೈಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಚೆಮರ್ ಹೋಲ್ಡರ್, ಶೈ ಹೋಪ್, ಅಲ್ಝಾರಿ ಜೋಸೆಫ್, ರೇಮನ್ ರೀಫರ್ ಮತ್ತು ಕೆಮರ್ ರೋಚ್.

Story first published: Tuesday, July 7, 2020, 10:08 [IST]
Other articles published on Jul 7, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+