Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್: ಸಂಭಾವ್ಯ ತಂಡಗಳು, ಪ್ರಮುಖ ಮಾಹಿತಿ

England vs West Indies 1st Test: probable XI, Live Scorecard

ಸೌತಾಂಪ್ಟನ್: ಕೊರೊನಾವೈರಸ್‌ನಿಂದಾಗಿ ನಿಲುಗಡೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ವೆಸ್ಟ್ ಇಂಡೀಸ್ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಮೂಲಕ ಪುನರಾರಂಭಗೊಳ್ಳಲಿದೆ. ಇಂಗ್ಲೆಂಡ್‌ನ ಸೌತಾಂಪ್ಟನ್‌ನ ರೋಸ್‌ ಬೌಲ್‌ ಸ್ಟೇಡಿಯಂನಲ್ಲಿ ಜುಲೈ 8ರ ಬುಧವಾರ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳು ಮೊದಲ ಟೆಸ್ಟ್‌ ಪಂದ್ಯವನ್ನಾಡಲಿವೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 8ಕ್ಕೆ ಭಾರತೀಯ ಕಾಲಮಾನ 3:30 PMಗೆ ಆರಂಭವಾಗಲಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್‌ಡಿ, ಸೋನಿ ಟೆನ್ ಸ್ಪೋರ್ಟ್ಸ್ 1, ಸೋನಿ ಟೆನ್ ಸ್ಪೋರ್ಟ್ಸ್ 1 ಎಚ್‌ಡಿ ಚಾನೆಲ್‌ಗಳಲ್ಲಿ ಲೈವ್ ಪಂದ್ಯ ವೀಕ್ಷಿಸಬಹುದು.

ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಎರಡೂ ತಂಡಗಳೂ ಪ್ರಬಲ ಪೈಪೋಟಿ ನೀಡುವುದನ್ನು ನಿರೀಕ್ಷಿಸಬಹುದು. ಆದರೆ ತವರಿನಲ್ಲಿ ನಡೆಯುವ ಪಂದ್ಯವಾದ್ದರಿಂದ ಇಂಗ್ಲೆಂಡ್ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ವೇಗಿಗಳ ಸಂಖ್ಯೆ ಹೆಚ್ಚಿದ್ದು, ಕೆರಿಬಿಯನ್ನರೂ ಪಂದ್ಯ ಗೆದ್ದು ಸರಣಿ ಮುನ್ನಡೆಯತ್ತ ಕಣ್ಣಿಟ್ಟಿದ್ದಾರೆ.

ಇಂಗ್ಲೆಂಡ್ ಸಂಭಾವ್ಯ ತಂಡ: ಬೆನ್ ಸ್ಟೋಕ್ಸ್ (ಕ್ಯಾಪ್ಟನ್), ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಜೋ ಡೆನ್ಲಿ, ಝಾಕ್ ಕ್ರಾಲೆ, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೊಮ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.

ವೆಸ್ಟ್ ಇಂಡೀಸ್ ಸಂಭಾವ್ಯ ತಂಡ: ಜೇಸನ್ ಹೋಲ್ಡರ್ (ಕ್ಯಾಪ್ಟನ್), ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆಟ್‌ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.

Story first published: Wednesday, July 8, 2020, 9:56 [IST]
Other articles published on Jul 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+