ಇಂಗ್ಲೆಂಡ್ vs ವಿಂಡೀಸ್ ಟೆಸ್ಟ್ : ಮೊದಲ ದಿನ ಮಳೆಯದ್ದೇ ಆಟ

ಸುದೀರ್ಘ 117 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಆರಂಭವಾಗಿದೆ. ಆದರೆ ಇದಕ್ಕೆ ಮಳೆಯ ಕಾಟ ಜೋರಾಗಿದೆ. ಮೊದಲ ದಿನದ ಆಟವನ್ನು ಮಳೆ ಬಹುತೇಕ ಆಹುತಿ ತೆಗೆದುಕೊಂಡಿದೆ. ಮೊದಲ ದಿನ ಕೇವಲ 17.4 ಓವರ್‌ಗಳ ಪಂದ್ಯ ಮಾತ್ರವೇ ನಡೆಯಲು ಸಾಧ್ಯವಾಗಿದೆ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಒಳಗಾಯಿತು.ಗೇಬ್ರಿಯಲ್ ಎಸೆತ ಡೊಮೆನಿಕ್ ಸಿಬ್ಲೇ ಅವರನ್ನು ಬೌಲ್ಡ್ ಮಾಡುವ ಮೂಲಕ ಪ್ರವಾಸಿ ತಂಡಕ್ಕೆ ಆರಂಭಿಕ ಯಶಸ್ಸು ನೀಡಿದ್ದಾರೆ. ಮಳೆಯಿಂದಾಗಿ ದಿನದ ಆಟ ಅಂತ್ಯಗೊಂಡಾಗ 17.4 ಓವರ್‌ಗಳಲ್ಲಿ ಇಂಗ್ಲೆಂಡ್ 1 ವಿಕೆಟ್ ಕಳೆದು 35 ರನ್ ಗಳಿಸಿದೆ.
ಪಂದ್ಯದ ಲೈವ್ ಸ್ಕೋರ್‌ಪಟ್ಟಿ ಹೀಗಿದೆ:
ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಎರಡೂ ತಂಡಗಳೂ ಪ್ರಬಲ ಪೈಪೋಟಿ ನೀಡುವುದನ್ನು ನಿರೀಕ್ಷಿಸಬಹುದು. ಆದರೆ ತವರಿನಲ್ಲಿ ನಡೆಯುವ ಪಂದ್ಯವಾದ್ದರಿಂದ ಇಂಗ್ಲೆಂಡ್ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿದೆ. ವೆಸ್ಟ್ ಇಂಡೀಸ್ ತಂಡದಲ್ಲಿ ವೇಗಿಗಳ ಸಂಖ್ಯೆ ಹೆಚ್ಚಿದ್ದು, ಕೆರಿಬಿಯನ್ನರೂ ಪಂದ್ಯ ಗೆದ್ದು ಸರಣಿ ಮುನ್ನಡೆಯತ್ತ ಕಣ್ಣಿಟ್ಟಿದ್ದಾರೆ.
ಎರಡೂ ತಂಡಗಳ ಆಡುವ ಬಳಗ ಹೀಗಿದೆ:
ಇಂಗ್ಲೆಂಡ್:
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ಡೆನ್ಲಿ, ಜಾಕ್ ಕ್ರಾಲೆ, ಬೆನ್ ಸ್ಟೋಕ್ಸ್ (ನಾಯಕ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್
ವೆಸ್ಟ್ ಇಂಡೀಸ್:
ಜಾನ್ ಕ್ಯಾಂಪ್ಬೆಲ್, ಕ್ರೇಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಶಾಯ್ ಹೋಪ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್ (ನಾಯಕ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications