For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್: ಕೆರಿಬಿಯನ್ನರ ಮಣಿಸಿದ ಆಂಗ್ಲರು

England vs West Indies, 2nd Test, Day 4 - Live Score

ಮ್ಯಾನ್ಚೆಸ್ಟರ್‌, ಜುಲೈ 20: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಸೋಮವಾರ ಮುಕ್ತಾಯಗೊಂಡ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 113 ರನ್ ಜಯ ಗಳಿಸಿದೆ. ಮೊದಲ ಟೆಸ್ಟ್‌ನಲ್ಲಿ ಪರಾಭವಗೊಂಡಿದ್ದ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಅಂತಿಮ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್, ಕ್ರೇಗ್ ಬ್ರಾತ್‌ವೇಟ್ 12, ಜಾನ್ ಕ್ಯಾಂಪ್‌ಬೆಲ್ 4, ಶೈ ಹೋಪ್ 7, ಶಮರ್ ಬ್ರೂಕ್ಸ್ 62, ರೋಸ್ಟನ್ ಚೇಸ್ 6, ಜೆರ್ಮೈನ್ ಬ್ಲ್ಯಾಕ್ವುಡ್ 55, ಜೇಸನ್ ಹೋಲ್ಡರ್ 35, ಅಲ್ಜಾರಿ ಜೋಸೆಫ್ 9, ಕೆಮರ್ ರೋಚ್ 5, ರನ್‌ನೊಂದಿಗೆ 70.1 ಓವರ್‌ಗೆ 198 ರನ್ ಗಳಿಸಿತು.

ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್ ಪಂದ್ಯ, ಸ್ಕೋರ್‌ಕಾರ್ಡ್

1
46754

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದಿಂದ, ಜೋಸ್ ಬಟ್ಲರ್ 0, ಝಾಕ್ ಕ್ರಾಲೆ 11, ಜೋ ರೂಟ್ 22, ಬೆನ್ ಸ್ಟೋಕ್ಸ್ ಅಜೇಯ 78, ಆಲಿ ಪೋಪ್ ಅಜೇಯ 12 ರನ್ ಬಾರಿಸಿದರು. ಇಂಗ್ಲೆಂಡ್ 19 ಓವರ್‌ಗೆ 3 ವಿಕೆಟ್ ಕಳೆದು 129 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಡೊಮಿನಿಕ್ ಸಿಬ್ಲಿ 120, ಬೆನ್ ಸ್ಟೋಕ್ಸ್ 176 ರನ್‌ನೊಂದಿಗೆ 162 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 469 ರನ್ ಬಾರಿಸಿ ಡಿಕ್ಲೇರ್ ಘೊಷಿಸಿತ್ತು. ವೆಸ್ಟ್ ಇಂಡೀಸ್ ತಂಡ, ಕ್ರೇಗ್ ಬ್ರಾಥ್‌ವೈಟ್ 75, ಶಮರ್ ಬ್ರೂಕ್ಸ್ 68, ರೋಸ್ಟನ್ ಚೇಸ್ 51 ರನ್ ಕೊಡುಗೆಯೊಂದಿಗೆ 287 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು. ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝಾಕ್ ಕ್ರಾಲೆ, ಜೋ ರೂಟ್ (ಸಿ), ಬೆನ್ ಸ್ಟೋಕ್ಸ್, ಆ್ಯಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್.

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೇಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.

Story first published: Monday, July 20, 2020, 23:12 [IST]
Other articles published on Jul 20, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+