
ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳ ಶತಕದೊಂದಿಗೆ ಅತ್ಯುತ್ತಮ ರನ್ ಪೇರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಇಂಗ್ಲೆಂಡ್‌ನ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿ ಅವರ 120 ರನ್ ಹಾಗೂ ಬೆನ್ ಸ್ಟೋಕ್ಸ್ ಸಿಡಿಸಿದ 176 ರನ್‌ಗಳ ಸಹಾಯದಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ಪರವಾಗಿ ರೊಸ್ಟೋನ್ ಚೇಸ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಿದ್ದಾರೆ.
ಇನ್ನು ಬಳಿಕ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆರಂಭಿಸಿದ್ದು ಆರಂಭಿಕ ಆಟಗಾರ ಜೋನ್ ಕ್ಯಾಂಪ್‌ಬೆಲ್ ವಿಕೆಟ್ ಕಳೆದುಕೊಂಡಿದೆ.
live ಸ್ಕೋರ್ ಪಟ್ಟಿ ಹೀಗಿದೆ:
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕನ ನಿರ್ಧಾರವನ್ನು ಆರಂಭದಲ್ಲಿ ಸಮರ್ಥಿಸಿಕೊಂಡ ವೆಸ್ಟ್ ಇಂಡೀಸ್ ಬೌಲರ್‌ಗಳು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಆಘಾತವನ್ನು ನೀಡಿದರು. ವೆಸ್ಟ್ ಇಂಡೀಸ್ ಪರ ರೋಸ್ಟೊನ್ ಚೇಸ್ 2 ವಿಕೆಟ್ ಪಡೆದರೆ 1 ವಿಕೆಟ್ ಅಲ್ಜರಿ ಜೋಸೆಫ್ ಪಾಲಾಗಿದೆ.
ಇಂಗ್ಲೆಂಡ್ ತಂಡದ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲೆ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕುರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್
ವೆಸ್ಟ್ ಇಂಡೀಸ್ ತಂಡದ ಆಡುವ ಬಳಗ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್ (ನಾಯಕ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್