ಇಂಗ್ಲೆಂಡ್ vs ವಿಂಡೀಸ್ 2ನೇ ಟೆಸ್ಟ್: ಮೊದಲ ದಿನ ವಿಂಡೀಸ್ ದಾಳಿಗೆ ಇಂಗ್ಲೆಂಡ್‌ನಿಂದ ತಾಳ್ಮೆಯ ಪ್ರತ್ಯುತ್ತರ

ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಆರಂಭಿಕ ಆಘಾತದ ನಂತರ ಉತ್ತಮ ಆಟಕ್ಕೆ ಮರಳಿದೆ. ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 3 ವಿಕೆಟನ್ನು ಕಳೆದುಕೊಂಡು 207 ರನ್ ಗಳಿಸಿದೆ. ಈ ಮೂಲಕ ಪಂದ್ಯದ ಆರಂಭದಲ್ಲಿದ್ದ ಆತಂಕದಿಂದ ಸದ್ಯಕ್ಕೆ ಪಾರಾಗಿದೆ.
ಪಂದ್ಯದ ಸ್ಕೋರ್‌ಪಟ್ಟಿ ಹೀಗಿದೆ
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ವೆಸ್ಟ್ ಇಂಡೀಸ್ ಬೌಲರ್‌ಗಳು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಆಘಾತವನ್ನು ನೀಡಿದರು. 14ನೇ ಓವರ್‌ನ ಸತತ ಎರಡು ಎಸೆತಗಳಲ್ಲಿ ರೋರಿ ಬರ್ನ್ಸ್ ಹಾಗೂ ಜಾಕ್ ಕ್ರಾವ್ಲಿ ವಿಕೆಟನ್ನು ರೋಸ್ಟನ್ ಚೇಸ್ ಕಿತ್ತು ವಿಂಡೀಸ್‌ಗೆ ಯಶಸ್ಸು ತಂದಿತ್ತರು.
ಮುಂದೆ ಇಂಗ್ಲೆಂಡ್ 81 ರನ್ ಗಳಿಸುವಷ್ಟರಲ್ಲಿ ನಾಯಕ ಜೋ ರೂಟ್ ಅಲ್ಜರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ಪಾಳಯದಲ್ಲಿ ದೊಡ್ಡ ಆತಂಕ ಮನೆ ಮಾಡಿತ್ತು. ಆದರೆ ಆರಂಭಿಕ ಆಟಗಾರ ಡಾಮಿನಿಕ್ ಸಿಬ್ಲೆ ಮತ್ತು ಬೆನ್ ಸ್ಟೋಕ್ಸ್ ತಂಡವನ್ನು ತಾಳ್ಮೆಯ ಆಟವಾಡುತ್ತಾ ವೆಸ್ಟ್ ಇಂಡೀಸ್ ಬೌಲರ್‌ಗಳಿಗೆ ಮುಂದೆ ಯಶಸ್ಸು ದೊರೆಯದಂತೆ ಮಾಡಲು ಸಫಲರಾದರು.
ಉತ್ತಮವಾಗಿ ಆಡುತ್ತಿರುವ ಡಾಮಿನಿಕ್ ಸಿಬ್ಲೆ86 ರನ್ ಗಳಿಸಿದ್ದರೆ, ಬೆನ್ ಸ್ಟೋಕ್ಸ್ 59 ರನ್ ಗಳಿಸಿ ಉತ್ತಮ ಆಟವನ್ನು ಪ್ರದರ್ಶಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ರೋಸ್ಟೊನ್ ಚೇಸ್ 2 ವಿಕೆಟ್ ಪಡೆದರೆ 1 ವಿಕೆಟ್ ಅಲ್ಜರಿ ಜೋಸೆಫ್ ಪಾಲಾಗಿದೆ.
ಇಂಗ್ಲೆಂಡ್ ತಂಡದ ಆಡುವ ಬಳಗ:
ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜಾಕ್ ಕ್ರಾಲೆ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕುರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್
ವೆಸ್ಟ್ ಇಂಡೀಸ್ ತಂಡದ ಆಡುವ ಬಳಗ:
ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಶೇನ್ ಡೌರಿಚ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್ (ನಾಯಕ), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications