ಇಂಗ್ಲೆಂಡ್ vs ವೆಸ್ಟ್ ಇಂಡೀಸ್, Live Score: ಸೋಲಿನ ಸುಳಿಯಲ್ಲಿ ವಿಂಡೀಸ್

ಮ್ಯಾನ್ಚೆಸ್ಟರ್, ಜುಲೈ 26: ಮೂರು ಪಂದ್ಯಗಳ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿರುವ ಇಂಗ್ಲೆಂಡ್ ಮೂರನೇ ಪಂದ್ಯವನ್ನು ಗೆಲ್ಲುವುದು ಬಹುತೇಕ ಖಚಿತವೆನಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್ ಗಳಿಸಿ ಆಲೌಟ್ ಆದ ಇಂಗ್ಲೆಂಡ್ ಬಳಿಕ ಬೌಲಿಂಗ್‌ನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆತಿಥೇಯರ ಬೌಲಿಂಗ್ ದಾಳಿಗೆ ಕಂಗೆಟ್ಟ ವೆಸ್ಟ್ ಇಂಡಿಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 197 ರನ್‌ಗಳಿಗೆ ಆಲೌಟ್ ಆಯ್ತು.
ಮತ್ತೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲೂ ಇಂಗ್ಲೆಂಡ್ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಯಿತು. ಅತ್ತ ವೆಸ್ಟ್ ಇಂಡೀಸ್ ಬೌಲರ್‌ಗಳು ಸಂಪೂರ್ಣ ವೈಫಲ್ಯತೆ ಅನುಭವಿಸಿದರು. 226 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಬಳಿಕ ಇನ್ನಿಂಗ್ಸ್ ಡಿಕ್ಷೇರ್ ಮಾಡಿರು.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರವಾಗಿ ಆರಂಭಿಕ ಆಟಗಾರ ರೋರಿ ಬರ್ನ್ಸ್ 90 ರನ್ ಗಳಿಸಿ ಔಟಾದರೆ ಸಿಬ್ಲಿ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಜೋ ರೂಟ್ ಅಜೇಯ 68 ರನ್ ಗಳಿಸಿದರು. ಈ ಮೂಲಕ ಅಂತಿಮ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ಗೆ 399 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ನೀಡಿದೆ.
ಇಂಗ್ಲೆಂಡ್ ನೀಡಿದ ಈ ಗುರಿಯನ್ನು ಬೆನ್ನತ್ತಿರುವ ವೆಸ್ಟ್ ಇಂಡೀಸ್ ಆರಂಭದಲ್ಲೇ ಮುಗ್ಗರಿಸಿದೆ. 10 ರನ್ ಗಳಿಸುವಷ್ಟರಲ್ಲಿ ತನ್ನ 2 ಪ್ರಮುಖ ವಿಕೆಟ್‌ಗಳನ್ನು ವೆಸ್ಟ್ ಇಂಡೀಸ್ ಕಳೆದುಕೊಂಡಿದೆ. ಇನ್ನೂ ಎರಡು ದಿನಗಳ ಪಂದ್ಯ ಬಾಕಿಯಿದ್ದು ವೆಸ್ಟ್ ಇಂಡೀಸ್ ಗೆಲುವಿಗೆ ಪವಾಡವೇ ನಡೆಯಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications