ಮ್ಯಾನ್ಚೆಸ್ಟರ್: ಜುಲೈ 24ರ ಶುಕ್ರವಾರ ಇಂಗ್ಲೆಂಡ್ನ ಮ್ಯಾನ್ಚೆಸ್ಟರ್ನಲ್ಲಿರುವ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಮೂರನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಆಂಗ್ಲರು ಮತ್ತು ಕೆರಿಬಿಯನ್ನರು ತಲಾ 1 ಪಂದ್ಯ ಗೆದ್ದಿರುವುದರಿಂದ ಸರಣಿ ಗೆಲುವಿನ ನಿಟ್ಟಿನಲ್ಲಿ 3ನೇ ಟೆಸ್ಟ್ ಕುತೂಹಲ ಮೂಡಿಸಿದೆ.
'ಐಪಿಎಲ್ 2020' ಆರಂಭ-ಅಂತ್ಯದ ನಿಜವಾದ ದಿನಾಂಕ ಪ್ರಕಟ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚತುರ ಪ್ರದರ್ಶನ ನೀಡಿದ್ದ ಜೇಸನ್ ಹೋಲ್ಡರ್ ಪಡೆ ಆರಂಭಿಕ ಟೆಸ್ಟ್ನಲ್ಲಿ 4 ವಿಕೆಟ್ ಗೆಲುವನ್ನಾಚರಿಸಿತ್ತು. ಬೆನ್ ಸ್ಟೋಕ್ಸ್ ವೀರೋಚಿತ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡ ದ್ವಿತೀಯ ಟೆಸ್ಟನ್ನು 113 ರನ್ನಿಂದ ಗೆಲ್ಲುವ ಮೂಲಕ ಕೆರಿಬಿಯನ್ನರಿಗೆ ತಿರುಗೇಟು ನೀಡಿತ್ತು.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 3ನೇ ಟೆಸ್ಟ್, Live ಸ್ಕೋರ್ಕಾರ್ಡ್
ಮೂರು ಪಂದ್ಯಗಳ ಸರಣಿ ಈಗ 1-1ರಿಂದ ಸಮಬಲಗೊಂಡಿರುವುದರಿಂದ ಅಂತಿಮ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ಗೆಲ್ಲುವ ಫೇವರಿಟ್ ಅನ್ನಿಸಿದರೂ ವೆಸ್ಟ್ ಇಂಡೀಸ್ ಗೆದ್ದರೂ ಅಚ್ಚರಿಯಿಲ್ಲ. ಪಂದ್ಯ ಹಿಂದಿನಂತೆ 3:30 PMಗೆ ಆರಂಭಗೊಳ್ಳಲಿದೆ. ಸೋನಿ Liv, ಸೋನಿ ನೆಟ್ವರ್ಕ್ ಚಾನೆಲ್ಗಳಲ್ಲಿ ನೇರಪ್ರಸಾರ ಸಿಗಲಿದೆ. ಮೈಖೇಲ್ ಕನ್ನಡದಲ್ಲೂ Live ಸ್ಕೋರ್ಕಾರ್ಡ್ ಪ್ರಕಟವಾಗಲಿದೆ.
ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!
ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ಜೋಸ್ ಬಟ್ಲರ್ (ವಿಕೆ), ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝಾಕ್ ಕ್ರಾಲೆ, ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಮಾರ್ಕ್ ವುಡ್.
ಚೆಕ್ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್ನ 5 ಸತ್ಯ ಸಂಗತಿಗಳು!
ವೆಸ್ಟ್ ಇಂಡೀಸ್ ತಂಡ: ಶೇನ್ ಡೌರಿಚ್ (ವಿಕೆ), ಜೇಸನ್ ಹೋಲ್ಡರ್ (ಸಿ), ಕ್ರೇಗ್ ಬ್ರಾಥ್ವೈಟ್, ಜಾನ್ ಕ್ಯಾಂಪ್ಬೆಲ್, ಅಲ್ಜಾರಿ ಜೋಸೆಫ್, ಶೈ ಹೋಪ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್ವುಡ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್, ಎನ್ಕ್ರುಮಾ ಬೊನ್ನರ್, ರಾಕೀಮ್ ಕಾರ್ನ್ವಾಲ್, ರೇಮನ್ ರೀಫರ್, ಕೆಮರ್ ಹೋಲ್ಡರ್.