ಇಂಗ್ಲೆಂಡ್ vs ವೆಸ್ಟ್ ಇಂಡೀಸ್: ನಿರ್ಣಾಯಕ ಟೆಸ್ಟ್ ವೇಳೆಯ ಹವಾಮಾನ ವರದಿ

ಮ್ಯಾನ್ಚೆಸ್ಟರ್, ಜುಲೈ 23: ಬೆನ್ ಸ್ಟೋಕ್ಸ್ ಅವರ ವೀರೋಚಿತ ಆಟದ ನೆರವಿನಿಂದ, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು 1-1 ಸಮಬಲ ಸಾಧಿಸಿವೆ. ಮೂರನೇ ಮತ್ತು ಸರಣಿ ನಿರ್ಣಾಯಕ ಪಂದ್ಯ ಜುಲೈ 24ರ ಶುಕ್ರವಾರ ಆರಂಭವಾಗಲಿದೆ.
ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಆರಂಭದಿಂದಲೂ ವರುಣನ ಕಾಟವಿತ್ತು. ಮೊದಲ ಎರಡೂ ಪಂದ್ಯಗಳು ಮಳೆಯಿಂದಾಗಿ ತಡವಾಗಿ ಆರಂಭವಾಗಿತ್ತು. ಮೂರನೇ ಟೆಸ್ಟ್ ವೇಳೆಯೂ ಮಳೆಯ ತೊಂದರೆ ಕಾಡಲಿದೆಯೇ? ಹೌದೆನ್ನುತ್ತದೆ ಮ್ಯಾನ್ಚೆಸ್ಟರ್ ಹವಾಮಾನ ವರದಿ.
ಮೂರನೇ ಮತ್ತು ಟೆಸ್ಟ್ ಪಂದ್ಯ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲನೇ ದಿನ ಮಳೆಯ ಸಾಧ್ಯತೆ ತುಂಬಾ ಕಡಿಮೆ ಅಂದರೆ 6 ಶೇಕಡಾ ಇರಲಿದೆ. ಆದರೆ ಶನಿವಾರ ಮತ್ತು ಭಾನುವಾರ ಮ್ಯಾನ್ಚೆಸ್ಟರ್‌ನಲ್ಲಿ ವರುಣನ ಅಬ್ಬರ ಜೋರಿರಲಿದೆ. ಈ ಎರಡು ದಿನ ಮಳೆಯ ಸಾಧ್ಯತೆ ಶೇ. 69ರಿಂದ 66ರಷ್ಟಿದೆ.
3ನೇ ಟೆಸ್ಟ್‌ನ 4ನೇ ದಿನದಾಟದ ವೇಳೆ ಅಂದರೆ ಸೋಮವಾರ, ಕೊಂಚ ಬಿಸಿಲನ್ನು ನಿರೀಕ್ಷಿಸಬಹುದು. ಕೊನೇಯ ದಿನದಾಟವಾದ ಮಂಗಳವಾರ ಮತ್ತೆ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ಸೋಮವಾರ ಮಳೆಯ ಸಾಧ್ಯತೆ 25 ಶೇ. ಇದ್ದರೆ, ಮಂಗಳವಾರ 71 ಶೇ. ಇರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications