ಅಂದು 6 ಸಿಕ್ಸ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್‌ರಿಂದ ಇಂದು ಟೆಸ್ಟ್ ದಾಖಲೆ!

ಮ್ಯಾನ್ಚೆಸ್ಟರ್: 2007ರಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರಿಂದ ಓವರ್ ಒಂದರಲ್ಲಿ ಪ್ರತೀ ಎಸೆತಕ್ಕೂ ಸಿಕ್ಸ್ ಹೊಡೆಸಿಕೊಂಡು ತೀವ್ರ ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್, ಆ ಕಹಿ (ಭಾರತೀಯರ ಪಾಲಿಗೆ ಸಿಹಿ) ಘಟನೆಯಾಗಿ 13 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ 4ನೇ ವೇಗಿಯಾಗಿ, ವಿಶ್ವದ 7ನೇ ಬೌಲರ್ ಆಗಿ, ಇಂಗ್ಲೆಂಡ್‌ನ 2ನೇ ಆಟಗಾರನಾಗಿ ಬ್ರಾಡ್ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಈ ಸಾಧನೆ ಮೆರೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ದಾಖಲೆ ಈವರೆಗೆ ಮಾಡಿದ್ದು ಒಟ್ಟಿಗೆ 7 ಮಂದಿ. ಇದರಲ್ಲಿ ಒಬ್ಬ ಭಾರತೀಯ ಆಟಗಾರರೂ ಇದ್ದಾರೆ.

ಸರಣಿಯಲ್ಲಿ ಒಟ್ಟು 15+ ವಿಕೆಟ್‌ಗಳು
ವೆಸ್ಟ್ ಇಂಡೀಸ್‌ನ ಅಂತಿಮ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕ್ರೇಗ್ ಬ್ರಾಥ್‌ವೇಟ್ ವಿಕೆಟ್ ಪಡೆಯುವುದರೊಂದಿಗೆ ಬ್ರಾಡ್, ಟೆಸ್ಟ್‌ನಲ್ಲಿ 500 ವಿಕೆಟ್‌ಗಳ ದಾಖಲೆ ಪೂರೈಸಿಕೊಂಡರು. ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಈ ಟೆಸ್ಟ್ ಸರಣಿಯಲ್ಲೇ ಬ್ರಾಡ್ 15+ ವಿಕೆಟ್ ಪಡೆದುಕೊಂಡಿದ್ದಾರೆ.

ಟೆಸ್ಟ್ ಚಾಂಪ್ಸ್.ನಲ್ಲಿ ನಂ.1 ಬೌಲರ್
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಟುವರ್ಟ್, ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಈಗ 1. ಸ್ಟುವರ್ಟ್ ಬ್ರಾಡ್* (52 ವಿಕೆಟ್‌ಗಳು), 2. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (49), 3. ನೇಥನ್ ಲಿಯಾನ್ (47), 4. ಮೊಹಮ್ಮದ್ ಶಮಿ (36), 5. ನ್ಯೂಜಿಲೆಂಡ್‌ನ ಟಿಮ್ ಸೌಥೀ (33) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

6 ಸಿಕ್ಸರ್ ಕಹಿ ನೆನಪು
ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ 2007ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 21ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಓವರ್ ಒಂದರಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಆವತ್ತು ಆ ಓವರ್ ಎಸೆದಿದ್ದು ಇದೇ ಸ್ಟುವರ್ಟ್ ಬ್ರಾಡ್. ಸ್ಟುವರ್ಟ್ ಬ್ರಾಡ್‌ಗೆ ಅಂದು 4 ಓವರ್‌ಗಳಲ್ಲಿ ಒಂದೂ ವಿಕೆಟ್ ಲಭಿಸಿರಲ್ಲ. ಆ ಪಂದ್ಯದಲ್ಲಿ ಭಾರತ 18 ರನ್‌ಗಳ ಜಯ ಸಾಧಿಸಿತ್ತು.

ಟೆಸ್ಟ್‌ನಲ್ಲಿ 500 ವಿಕೆಟ್ ಸರದಾರರು
ಟೆಸ್ಟ್ ಕ್ರಿಕೆಟ್‌ನಲ್ಲಿ 500+ ವಿಕೆಟ್ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (87 ಪಂದ್ಯಗಳು), ಭಾರತದ ಅನಿಲ್ ಕುಂಬ್ಳೆ (105), ಆಸ್ಟ್ರೇಲಿಯಾದ ಶೇನ್ ವಾರ್ನ್ (108), ಗ್ಲೆನ್ ಮೆಗ್ರಾತ್ (110), ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (129), ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ (140) ಹೆಸರುಗಳಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications