Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶೀಘ್ರ ಆರಂಭವಾಗಲಿರುವ ಇಂಗ್ಲೆಂಡ್ vs ವಿಂಡೀಸ್ ಸರಣಿಯ ಪೂರ್ಣ ವೇಳಾಪಟ್ಟಿ

England vs West Indies test 2020: Complete Schedule

ಲಂಡನ್: ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಜೂನ್ 9ರ ಮಂಗಳವಾರ ಇಂಗ್ಲೆಂಡ್‌ಗೆ ಬಂದಿಳಿದಿದೆ. ಕೊರೊನಾವೈರಸ್ ಕಾರಣದಿಂದಾಗಿ ಪಂದ್ಯವನ್ನು ಖುದ್ದಾಗಿ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶವಿಲ್ಲ. ಸರಣಿಯ ಪಂದ್ಯಗಳು ವೀಕ್ಷರಿಲ್ಲದ ಮೈದಾನದಲ್ಲಿ ನಡೆಯಲಿದೆ. ಸಿಬ್ಬಂದಿಯೂ ಸೇರಿ ವೆಸ್ಟ್ ಇಂಡೀಸ್‌ನಿಂದ ಒಟ್ಟು 39 ಮಂದಿ ಇಂಗ್ಲೆಂಡ್‌ಗೆ ಬಂದಿದ್ದು, ಇದರಲ್ಲಿ 25 ಮಂದಿ ಆಟಗಾರರು. ಆಟಗಾರರೆಲ್ಲ ತಮ್ಮ 7 ವಾರಗಳ ತಂಗುವಿಕೆಯಲ್ಲಿ ಜೈವಿಕ ಸುರಕ್ಷಿತ ಪರಿಸರದಲ್ಲಿ ಇರಲಿದ್ದಾರೆ ಮತ್ತು ಅಭ್ಯಾಸ ನಡೆಸಲಿದ್ದಾರೆ.

ಪ್ರವಾಸ ಸರಣಿಗಾಗಿ ಬಂದಿರುವ 39 ಮಂದಿಯ ಕೊರೊನಾ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ. ಐಸಿಸಿ ಮಾರ್ಗಸೂಚಿಯಂತೆ ಇಂಗ್ಲೆಂಡ್‌ನಲ್ಲಿ 14 ದಿನಗಳ ಕ್ವಾರಂಟೈನ್‌ ಬಳಿಕ ಕೆರಿಬಿಯನ್ನರು ಟೆಸ್ಟ್ ಸರಣಿ ಸಂಬಂಧ ಮೈದಾನಕ್ಕಿಳಿಯಿದ್ದಾರೆ.

ಕೊರೊನಾ ವೈರಸ್ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಿ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ವೇಳಾಪಟ್ಟಿ, ತಂಡಗಳು ಸಂಪೂರ್ಣ ವಿವರ ಇಲ್ಲಿದೆ.

ಟ್ವೀಟ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್

ಟ್ವೀಟ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್

ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್‌ಗೆ ಬಂದಿಳಿದಿರುವುದನ್ನು ಇಂಗ್ಲೆಂಡ್ ಕ್ರಿಕೆಟ್‌ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿತ್ತು. 'ಇಂಗ್ಲೆಂಡ್‌ಗೆ ಬಂದಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಸ್ವಾಗತ. ನೀವು ಇಲ್ಲಿಗೆ ಬಂದಿರುವುದಕ್ಕೆ ನಾವು ಸಂತೋಷಪಡುತ್ತೇವೆ ಮತ್ತು ನಮ್ಮ ಟೆಸ್ಟ್ ಸರಣಿಯನ್ನು ಪ್ರಾರಂಭಿಸಲು ಕಾತರದಿಂದ ಕಾಯುತ್ತಿದ್ದೇವೆ,' ಎಂದು ಟ್ವೀಟ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬರೆದುಕೊಂಡಿತ್ತು.

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ

ಜೇಸನ್ ಹೋಲ್ಡರ್ (ನಾಯಕ), ಜೆ ಬ್ಲಾಕ್ ವುಡ್, ಕ್ರುಮಾ ಬೊನರ್, ಕೆ ಬ್ರಥ್ ವೈಟ್, ಎಸ್ ಬ್ರೂಕ್ಸ್, ಜಾಸನ್ ಕ್ಯಾಂಪ್ ಬೆಲ್, ಆರ್ ಚೇಸ್, ಆರ್ ಕಾರ್ನ್ ವಾಲ್, ಎಸ್ ಡೌರಿಚ್ (ವಿಕೆಟ್ ಕೀಪರ್), ಕೆಮಾರ್ ಹೋಲ್ಡರ್, ಶಾನ್ ಹೋಪ್, ಎ ಜೋಸೆಫ್, ಆರ್ ರೀಫರ್, ಕಿಮಾರ್ ರೋಚ್.
ರಿಸರ್ವ್: ಸುನಿಲ್ ಆಂಬ್ರಿಸ್, ಜೋಶುವಾ ಡಾ ಸಿಲ್ವಾ, ಶಾನನ್ ಗ್ರ್ಯಾಬ್ರಿಯಲ್, ಕಿಯಾನ್ ಹಾರ್ಡಿಂಗ್, ಕೈಲಿ ಮೇಯರ್ಸ್, ಪ್ರೆಸ್ಟನ್ ಮೆಕ್ ಸ್ವೀನ್, ಮಾರ್ಕ್ವೆನೊ ಮಿಂಡ್ಲೆ, ಶೇನ್ ಮೊಸೆಲೆ, ಆಂಡರ್ಸನ್ ಫಿಲಿಫ್, ಓಶಾನೆ ಥಾಮಸ್, ಜೊಮೆಲ್ ವಾರಿಕನ್.

ಜೂನ್‌ನಲ್ಲಿ ನಡೆಯಬೇಕಿದ್ದ ಸರಣಿ

ಜೂನ್‌ನಲ್ಲಿ ನಡೆಯಬೇಕಿದ್ದ ಸರಣಿ

ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟೆಸ್ಟ್‌ ಸರಣಿ ಜೂನ್ ತಿಂಗಳಲ್ಲೇ ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಪ್ರವಾಸ ಸರಣಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಕೊರೊನಾವೈರಸ್ ನಂತರ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟೂರ್ನಿಯಾಗಿ ಇಂಗ್ಲೆಂಡ್-ವಿಂಡೀಸ್ ಟೆಸ್ಟ್ ಸರಣಿ ಗುರುತಿಸಿಕೊಳ್ಳಲಿದೆ.

ಟೆಸ್ಟ್ ಸರಣಿ ಪೂರ್ಣ ವೇಳಾಪಟ್ಟಿ

ಟೆಸ್ಟ್ ಸರಣಿ ಪೂರ್ಣ ವೇಳಾಪಟ್ಟಿ

• 1ನೇ ಟೆಸ್ಟ್: 8-12 ಜುಲೈ, ಏಜಸ್ ಬೌಲ್, ಸೌಂಥಾಪ್ಟನ್.
• 2ನೇ ಟೆಸ್ಟ್: 16-20 ಜುಲೈ, ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್.
• 3ನೇ ಟೆಸ್ಟ್: 24-28 ಜುಲೈ, ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್.

Story first published: Thursday, June 11, 2020, 21:41 [IST]
Other articles published on Jun 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+