ಇಂಗ್ಲೆಂಡ್ ಮಹಿಳಾ ವೇಗಿ ಕ್ಯಾಥರೀನ್ ಬ್ರಂಟ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

ಇಂಗ್ಲೆಂಡ್ ಮಹಿಳಾ ತಂಡದ ವೇಗಿ ಕ್ಯಾಥರೀನ್ ಬ್ರಂಟ್ ಶನಿವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ತಂಡಕ್ಕಾಗಿ 14 ಟೆಸ್ಟ್‌ಗಳನ್ನು ಆಡಿದ ಕ್ಯಾಥರೀನ್ ಬ್ರಂಟ್, 51 ವಿಕೆಟ್‌ಗಳೊಂದಿಗೆ ಟೆಸ್ಟ್ ಸ್ವರೂಪದಲ್ಲಿ ಮಿಂಚಿದರು. ಈ ಸ್ವರೂಪದಲ್ಲಿ ಇಂಗ್ಲೆಂಡ್‌ನ ಮಹಿಳಾ ಆಟಗಾರ್ತಿಯ ಮೂರನೇ ಅತಿ ಹೆಚ್ಚು ವಿಕೆಟ್-ಟೇಕರ್ ಆಗಿದ್ದಾರೆ.
ಆದಾಗ್ಯೂ 36 ವರ್ಷ ವಯಸ್ಸಿನ ಕ್ಯಾಥರೀನ್ ಬ್ರಂಟ್ ಇಂಗ್ಲೆಂಡ್ ತಂಡದ ಪರವಾಗಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡುವುದನ್ನು ಮುಂದುವರಿಸುವ ತೀರ್ಮಾನ ಕೈಗೊಂಡಿದ್ದಾರೆ. ಕ್ಯಾಥರೀನ್ ಬ್ರಂಟ್ 2004ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು ಮತ್ತು ಆ ವರ್ಷದ ನಂತರ ಇಂಗ್ಲೆಂಡ್ 42 ವರ್ಷಗಳ ನಂತರ ಮಹಿಳಾ ಆಶಸ್ ಟ್ರೋಫಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿದರು.
"ಕ್ರೀಡಾಪಟುವಾಗಿ ನೀವು ಇಷ್ಟಪಡುವ ಕೆಲಸವನ್ನು ಮಾಡುವುದರಿಂದ ಹಿಂದೆ ಸರಿಯಲು ಸ್ಪಷ್ಟ ಸಮಯವಿಲ್ಲ ಎಂದು ನಾನು ಭಾವಿಸುತ್ತೇನೆ,'' ಎಂದು ಕ್ಯಾಥರೀನ್ ಬ್ರಂಟ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕಳೆದ ಎರಡು ವರ್ಷಗಳಿಂದ ನಿವೃತ್ತಿಯ ಆಲೋಚನೆಗಳು ಹೆಚ್ಚು ಹೆಚ್ಚು ಕಾಣಿಸಿಕೊಂಡಿದ್ದವು, ಆದ್ದರಿಂದ ನಾನು ಭಾವನಾತ್ಮಕ ನಿರ್ಧಾರಕ್ಕಿಂತ ಬುದ್ಧಿವಂತ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಟೆಸ್ಟ್ ಕ್ರಿಕೆಟ್ ನನ್ನ ಸಂಪೂರ್ಣ ಉತ್ಸಾಹ ಮತ್ತು ಈ ಸ್ವರೂಪದಿಂದ ನಿವೃತ್ತಿ ಹೊಂದುವುದು ನಿಜವಾಗಿಯೂ ಹೃದಯ ಮುರಿಯುವ ಸಂಗತಿಯಾಗಿದೆ. ಆದರೆ ಇದು ವೈಟ್-ಬಾಲ್ ಕ್ರಿಕೆಟ್‌ಗೆ ಆದ್ಯತೆ ನೀಡಲು ನನಗೆ ಅವಕಾಶ ನೀಡುತ್ತದೆ," ಎಂದು ಕ್ಯಾಥರೀನ್ ಬ್ರಂಟ್ ಹೇಳಿದರು.
"ನಾನು ಅದನ್ನು ಉತ್ತಮ ಸಮಯದಲ್ಲಿ ಟೆಸ್ಟ್ ಕ್ರಿಕೆಟ್ ಬಿಡುತ್ತೇನೆ ಎಂದು ನನಗೆ ತಿಳಿದಿದೆ, ಹೊಸ ಬೌಲರ್‌ಗಳು ಸಿದ್ಧರಾಗಿದ್ದಾರೆ ಮತ್ತು ಅವರು ರಾಷ್ಟ್ರೀಯ ತಡಕ್ಕಾಗಿ ಆಡಲು ಕಾಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧದ ಪಂದ್ಯವು ಸದ್ಯದಲ್ಲೇ ನಡೆಯುತ್ತಿದ್ದು, ನಾನು ಹೊಸ ಬೌಲರ್‌ಗಳ ಪ್ರದರ್ಶನ ವೀಕ್ಷಿಸಲು ತುಂಬಾ ಎದುರು ನೋಡುತ್ತಿದ್ದೇನೆ, ಎಂದು ಕ್ಯಾಥರೀನ್ ಬ್ರಂಟ್ ವಿವರಿಸಿದರು.
ಏತನ್ಮಧ್ಯೆ, ಕ್ಯಾಥರೀನ್ ಬ್ರಂಟ್ ಅವರು 140 ಏಕದಿನ ಮತ್ತು 96 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 167 ಮತ್ತು 98 ವಿಕೆಟ್‌ಗಳನ್ನು ಪಡೆದಿದ್ದಾರೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ವೈಟ್ ಬಾಲ್ ಸರಣಿಯಲ್ಲಿ ಬ್ರಂಟ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಈ ತಿಂಗಳ ಕೊನೆಯಲ್ಲಿ (ಜೂನ್ 27-30) ಟೌಂಟನ್‌ನಲ್ಲಿ ಏಕೈಕ ಟೆಸ್ಟ್‌ನ ಮುಕ್ತಾಯದ ನಂತರ ಎರಡೂ ತಂಡಗಳು ಮೂರು ಏಕದಿನ ಪಂದ್ಯಗಳು ಮತ್ತು ಅನೇಕ ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications