ನಟಾಲಿಯಾ ಸೈವರ್ ಅರ್ಧ ಶತಕ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ನಾರ್ಥಾಂಪ್ಟನ್: ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ಶುಕ್ರವಾರ (ಜುಲೈ 9) ನಡೆದ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ಮೊದಲನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ 18 ರನ್ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿದೆ. ನಟಾಲಿಯಾ ಸೈವರ್ ಅರ್ಧ ಶತಕದೊಂದಿಗೆ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಮುನ್ನಡೆ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಮಹಿಳಾ ತಂಡ, ಟಮ್ಮಿ ಬ್ಯೂಮಾಂಟ್ 18, ಡೇನಿಯಲ್ ವ್ಯಾಟ್ 31, ನಟಾಲಿಯಾ ಸೈವರ್ 55, ಆಮಿ ಎಲ್ಲೆನ್ ಜೋನ್ಸ್ 43 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತು.
ಭಾರತೀಯ ಮಹಿಳೆರ ಇನ್ನಿಂಗ್ಸ್ ವೇಳೆ ಮಳೆ ಸುರಿದಿದ್ದರಿಂದ ಭಾರತಕ್ಕೆ 8.4 ಓವರ್‌ಗೆ 73 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನಟ್ಟಿದ ಭಾರತ, ಸ್ಮೃತಿ ಮಂಧಾನ 29, ಹರ್ಲಿನ್ ಡಿಯೋಲ್ 17, ದೀಪ್ತಿ ಶರ್ಮಾ 4 ರನ್‌ನೊಂದಿಗೆ 8.4 ಓವರ್‌ಗೆ 3 ವಿಕೆಟ್ ಕಳೆದು 54 ರನ್ ಗಳಿಸಿತು.
ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತ ಶಿಖಾ ಪಾಂಡೆ 3, ಪೂನಂ ಯಾದವ್ 1, ರಾಧಾ ಯಾದವ್ 1 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕೆಥರಿನ್ ಬ್ರಂಟ್ 1, ನಟಾಲಿಯಾ ಸೈವರ್ 1, ಸಾರಾ ಗ್ಲೆನ್ 1 ವಿಕೆಟ್‌ನಿಂದ ಗಮನ ಸೆಳೆದರು. ನಟಾಲಿಯಾ ಸೈವರ್ ಪಂದ್ಯಶ್ರೇಷ್ಠೆ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications