James Anderson: ವಿಶ್ವ ದಾಖಲೆ ಬರೆದ ಇಂಗ್ಲೆಂಡ್ ತಂಡದ ವೇಗದ ಬೌಲರ್: 700 ವಿಕೆಟ್ ಸಾಧನೆ
ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಬೆಳೆಸಿದಾಗ ಸರಣಿ ಗೆಲ್ಲುತ್ತದೋ ಇಲ್ಲವೋ ಎನ್ನುವ ಬಗ್ಗೆ ಅನುಮಾನ ಇತ್ತು. ಆದರೆ ಒಂದು ಮಾತ್ರ ನಿಶ್ಚಿತವಾಗಿ ಅಭಿಮಾನಿಗಳಿಗೆ ತಿಳಿದಿತ್ತು. ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಈ ಸರಣಿಯಲ್ಲಿ ಐತಿಹಾಸಿಕ ಮೈಲುಗಲ್ಲು ಮುಟ್ಟುತ್ತಾರೆ ಎಂಬುದು ಪಕ್ಕಾ ಆಗಿತ್ತು. ಅದರಂತೆ ಇಂಗ್ಲೆಂಡ್ ವೇಗಿ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಭಾರತದ ಪ್ರವಾಸವನ್ನು ಆರಂಭಿಸಿದಾಗ ಇಂಗ್ಲೆಂಡ್ ವೇಗಿ ಜೇಮ್ಸನ್ ಆಂಡರ್ಸನ್ ಅವರಿಗೆ 700 ವಿಕೆಟ್ ಪಡೆಯಲು 10 ವಿಕೆಟ್‌ಗಳ ಅವಶ್ಯಕತೆ ಇತ್ತು. ಆದರೆ ಇವರಿಗೆ ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಸಿಗಲಿಲ್ಲ. ಆದರೆ, ನಂತರದ ಎಲ್ಲ ಪಂದ್ಯಗಳಲ್ಲೂ ಆಡಿರುವ ಜೇಮ್ಸ್ ಆಂಡರ್ಸನ್ ಅಬ್ಬರಿಸಿದರು.

ಧರ್ಮಶಾಲಾ ಟೆಸ್ಟ್‌ನಲ್ಲಿ ಆಂಡರ್ಸನ್ ಈ ಸಾಧನೆ ಮಾಡುತ್ತಾರೆ ಎಂಬ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅದರಂತೆ ಈ ಅಂಗಳದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಂಡರ್ಸನ್ ಎರಡು ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications