ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಶತಕ'ಗಳ ಸನಿಹ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್

englands pacer james anderson took 99 wickets in lords

ಲಾರ್ಡ್ಸ್, ಆಗಸ್ಟ್ 11: ತಮ್ಮ ಸ್ವಿಂಗ್‌ಗಳ ಮೂಲಕ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ ಇಂಗ್ಲೆಂಡ್‌ನ ವೇಗಿ ಎರಡು ಶತಕಗಳ ದಾಖಲೆಯ ಸಮೀಪ ಬಂದಿದ್ದಾರೆ.

ಮೊದಲ ಓವರ್‌ನಲ್ಲಿಯೇ ಅದ್ಭುತ ಔಟ್ ಸ್ವಿಂಗರ್ ಮೂಲಕ ಮುರಳಿ ವಿಜಯ್ ವಿಕೆಟ್ ಎಗರಿಸಿದ ಆಂಡರ್ಸನ್, ಕೇವಲ 20 ರನ್ ನೀಡಿ 5 ವಿಕೆಟ್ ಪಡೆದು ಭಾರತ ತಂಡದ ಮೇಲೆ ಸವಾರಿ ನಡೆಸಿದರು.

20ಕ್ಕೆ 5 ವಿಕೆಟ್ ಕಿತ್ತು ಕೊಹ್ಲಿ ಬಳಗ ಕಾಡಿದ ಜೇಮ್ಸ್ ಆ್ಯಂಡರ್ಸನ್!20ಕ್ಕೆ 5 ವಿಕೆಟ್ ಕಿತ್ತು ಕೊಹ್ಲಿ ಬಳಗ ಕಾಡಿದ ಜೇಮ್ಸ್ ಆ್ಯಂಡರ್ಸನ್!

ಈ ಮೂಲಕ ಆಂಡರ್ಸನ್ ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡರು. ಜತೆಗೆ ಲಾರ್ಡ್ಸ್ ಮೈದಾನದಲ್ಲಿ ಅತ್ಯಧಿಕ (99) ವಿಕೆಟ್ ಕಬಳಿಸಿದ ದಾಖಲೆಯನ್ನೂ ಬರೆದರು.

ವರುಣ ಮತ್ತೆ ಅಡ್ಡಿಪಡಿಸದೆ ಇದ್ದರೆ ಭಾರತ ಎರಡನೆಯ ಇನ್ನಿಂಗ್ಸ್ ಆಡುವ ಸಂದರ್ಭ ಎದುರಾಗಲಿದೆ. ಆ ಇನ್ನಿಂಗ್ಸ್‌ನಲ್ಲಿಯೂ ಆಂಡರ್ಸನ್ ಇದೇ ರೀತಿಯ ಮಾರಕ ದಾಳಿ ನಡೆಸಿದರೆ ಈ ಎರಡರಲ್ಲಿಯೂ ಶತಕ ಸಾಧನೆ ಮಾಡುವ ಅವಕಾಶವಿದೆ.

ಕ್ರಿಕೆಟ್: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಕಿರಿಯರ ತಂಡ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಕಿರಿಯರ ತಂಡ

ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ವೇಗಿಗಳು
99- ಜೇಮ್ಸ್ ಆಂಡರ್ಸನ್
94- ಇಮ್ರಾನ್ ಖಾನ್
76- ಮಾಲ್ಕಂ ಮಾರ್ಷಲ್
67- ಆಂಡ್ರೂ ರಾಬರ್ಟ್ಸ್
65- ವೆಸ್ ಹಾಲ್/ರಿಚರ್ಡ್ ಹ್ಯಾಡ್ಲಿ/ಕರ್ಟ್ನಿ ವಾಲ್ಶ್/ಡೇಲ್ ಸ್ಟೇಯ್ನ್

ಮೈದಾನವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತವರು
166- ಮುತ್ತಯ್ಯ ಮುರಳೀಧರನ್, ಕೊಲಂಬೋ
117- ಮುತ್ತಯ್ಯ ಮುರಳೀಧರನ್, ಕ್ಯಾಂಡಿ
111- ಮುತ್ತಯ್ಯ ಮುರಳೀಧರನ್, ಗಾಲ್ಲೆ
99- ರಂಗನಾ ಹೆರಾತ್, ಗಾಲ್ಲೆ
99- ಜೇಮ್ಸ್ ಆಂಡರ್ಸನ್, ಲಾರ್ಡ್ಸ್

Story first published: Saturday, August 11, 2018, 11:00 [IST]
Other articles published on Aug 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X