ರಾಜಸ್ಥಾನ್ ರಾಯಲ್ಸ್ ಪರ ಓಪನರ್ ಆಗಿ ಆಟವನ್ನ ಎಂಜಾಯ್ ಮಾಡ್ತಿದ್ದೇನೆ: ಬೆನ್‌ಸ್ಟೋಕ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಓಪನರ್ ಆಗಿ ಆಡುವುದಕ್ಕೆ ಸಂತೋಷವಾಗಿದ್ದು, ಆಟವನ್ನು ಎಂಜಾಯ್ ಮಾಡುತ್ತಿರುವುದಾಗಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಹೇಳಿದ್ದಾರೆ.
ಎಎನ್‌ಐಗೆ ನೀಡಿದ ಸಂದರ್ಶನದ ವೇಳೆ ಬೆನ್‌ಸ್ಟೋಕ್ಸ್ ತಮ್ಮ ಆಟದ ಕುರಿತು ಮಾತನಾಡಿದ್ದು, ಹೊಸ ಪಾತ್ರದ ಕುರಿತು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
''ಹೌದು, ನಾನು ಈ ಹೊಸ ಪಾತ್ರವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಐಪಿಎಲ್ ಸಾಮಾನ್ಯವಾಗಿ ವರ್ಷದ ಆರಂಭದಲ್ಲಿ ನಡೆಯುತ್ತದೆ, ಆದ್ದರಿಂದ ನಾವು ಅದಕ್ಕೂ ಮುಂಚೆಯೇ ಚರ್ಚೆ ನಡೆಸಿದ್ದೇವೆ. ನಾನು ಹೊಸ ಪಾತ್ರವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಇದು ನಾನು ನಿಧಾನವಾಗಿ ಮತ್ತು ಕ್ರಮೇಣ ಪ್ರವೇಶಿಸಲು ಯಾವಾಗಲೂ ಬಯಸುತ್ತೇನೆ "ಎಂದು ಬೆನ್ ಸ್ಟೋಕ್ಸ್ ಎಎನ್‌ಐಗೆ ತಿಳಿಸಿದರು.
ರಾಜಸ್ಥಾನ್ ರಾಯಲ್ಸ್ ಯುವ ಯಶಸ್ವಿ ಜೈಸ್ವಾಲ್ ಅವರನ್ನು ಓಪನರ್ ಆಗಿ ಪ್ರಯತ್ನಿಸಿತ್ತು. ಆದರೆ ಅವರ ಕಡೆಯಿಂದ ಪ್ರದರ್ಶನ ಹೊರಬರದ ಹಿನ್ನೆಲೆಯಲ್ಲಿ, ಸ್ಟೋಕ್ಸ್ ಅವರನ್ನು ಆ ಸ್ಥಾನಕ್ಕೆ ಸೇರಿಸಲಾಯಿತು. ಆರಂಭಿಕ ಪಂದ್ಯದಲ್ಲಿ ರನ್‌ಗಳಿಸಲು ಹೆಣಗಾಡಿದ ಸ್ಟೋಕ್ಸ್ ನಂತರದಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದು, ಒಂದು ಶತಕವನ್ನು ಒಳಗೊಂಡಂತೆ ತಂಡಕ್ಕೆ ಕೆಲವು ಅದ್ಭುತ ಶಾಟ್‌ಗಳನ್ನು ಹೊಡೆದಿದ್ದು, ಓಪನರ್ ಪಾತ್ರವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications