Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾವೈರಸ್ ಅಂತಿಮ ಪರೀಕ್ಷೆಯಲ್ಲೂ ವೆಸ್ಟ್ ಇಂಡೀಸ್ ಪಾಸ್

Entire West Indies cricket squad clears final COVID test

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕೊರೊನಾವೈರಸ್ ಅಂತಿಮ ಪರೀಕ್ಷೆಯಲ್ಲೂ ಪಾಸ್ ಆಗಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕಾಗಿ ಕೆರಿಬಿಯನ್ ತಂಡ ಕ್ವೀನ್ಸ್ ಟೌನ್‌ಗೆ ಪ್ರಯಾಣಿಸಲಿದೆ.

ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ಸರಣಿ ನವೆಂಬರ್ 27ರಿಂದ ಆರಂಭಗೊಳ್ಳಲಿದೆ. ಪ್ರವಾಸವು 3 ಟಿ20ಐ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ. ಟಿ20 ಪಂದ್ಯಗಳ ಮೂಲಕ ಸರಣಿ ಆರಂಭವಾಗಲಿದ್ದು, ಟೆಸ್ಟ್‌ನೊಂದಿಗೆ ಮುಕ್ತಾಯವಾಗಲಿದೆ. ನವೆಂಬರ್ 20ಕ್ಕೆ ಅಭ್ಯಾಸ ಪಂದ್ಯ ನಡೆಯಲಿದೆ.

ಅಕ್ಟೋಬರ್‌ 30ರಂದು ನ್ಯೂಜಿಲೆಂಡ್ ತಲುಪಿದ್ದ ವೆಸ್ಟ್ ಇಂಡೀಸ್ ತಂಡ ಐಸೊಲೇಶನ್‌ನಲ್ಲಿತ್ತು. ತಂಡದ ಎಲ್ಲಾ ಆಟಗಾರರು, ಬೆಂಬಲ ಸಿಬ್ಬಂದಿ ಹಿಂದೆ ಎರಡು ಪರೀಕ್ಷೆಗಳನ್ನು ಪಾಸ್ ಮಾಡಿದ್ದರು. ಕೊನೇ ಪರೀಕ್ಷೆ ಬಾಕಿಯಿತ್ತು. ಅದರಲ್ಲೂ ತಂಡ ಮುಂದಿನ ಹಂತಕ್ಕೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ.

'ಮೂರನೇ ಮತ್ತು ಕೊನೇಯ ಕೊರೊನಾ ಪರೀಕ್ಷೆಯಲ್ಲೂ ವೆಸ್ಟ್ ಇಂಡೀಸ್‌ನ ಎಲ್ಲಾ ಸದಸ್ಯರ ವರದಿ ನೆಗೆಟಿವ್ ಬಂದಿದೆ. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ಪ್ರವಾಸ ನಿಮಿತ್ತ 12ನೇ ದಿನದ ಪರೀಕ್ಷೆ ಇದಾಗಿತ್ತು,' ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಹೇಳಿದೆ.

Story first published: Saturday, November 14, 2020, 9:52 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+