ಇಯಾನ್ ಮಾರ್ಗನ್ ನಿವೃತ್ತಿ: ಇಂಗ್ಲೆಂಡ್‌ನ ಕೂಲ್ ಕ್ಯಾಪ್ಟನ್‌ಗೆ ಶುಭ ಕೋರಿದ ಅಭಿಮಾನಿಗಳು

ಇಂಗ್ಲೆಂಡ್‌ನ ಅತ್ಯಂತ ಶ್ರೇಷ್ಟ ಯಶಸ್ವಿ ವೈಟ್‌ಬಾಲ್ ಕ್ರಿಕೆಟ್ ನಾಯಕ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಮಾರ್ಗನ್ ತಮ್ಮ 13 ವರ್ಷಗಳ ಅಮೋಘ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಮೂರು ಫಾರ್ಮೆಟ್‌ಗೆ ಗುಡ್‌ಬೈ ಹೇಳಿದ್ದಾರೆ.
2015ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿ ಲೀಗ್ ಹಂತದಲ್ಲೇ ಹೊರಬಿದ್ದಿದ್ದ ಇಂಗ್ಲೆಂಡ್ ತಂಡವನ್ನ ಅದ್ಭುತವಾಗಿ ಬಲಿಷ್ಠ ತಂಡವಾಗಿ ರೂಪಿಸಿದ್ದರ ಜೊತೆಗೆ, ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ತಂಡವನ್ನ ಮೊದಲ ಸ್ಥಾನಕ್ಕೆ ಕೊಂಡೊಯ್ದ ಸಾಧನೆ ಮಾಡಿದ್ದರು.
ಅನೇಕ ಪ್ರತಿಷ್ಠಿತ ಟೂರ್ನಿಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಜಯದ ಮಾಲೆ ತೊಡಿಸಿದ ಇಯಾನ್ ಮಾರ್ಗನ್ 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸುವಲ್ಲಿ ಯಶಸ್ವಿಯಾದ್ರು. ಇಷ್ಟೇ ಅಲ್ಲದೆ 2010ರ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಸದಸ್ಯ ಕೂಡ ಆಗಿದ್ದಾರೆ.

76 ಏಕದಿನ ಪಂದ್ಯಗಳಲ್ಲಿ ತಂಡವನ್ನ ಗೆಲ್ಲಿಸಿಕೊಟ್ಟಿದ್ದಾರೆ
126 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನ ಮುನ್ನಡೆಸಿರುವ ಇಯಾನ್ ಮಾರ್ಗನ್, 76 ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಶೇಕಡಾ 60ರಷ್ಟು ಸರಾಸರಿ ಗೆಲುವನ್ನು ಹೊಂದಿರುವ ಇಯಾನ್ ಮಾರ್ಗನ್, ಟಿ20 ಕ್ರಿಕೆಟ್‌ನಲ್ಲಿ 72 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿಯಷ್ಟೇ ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ.

ಏಕದಿನ ಮತ್ತು ಟಿ20ಯಲ್ಲಿ ಅತಿ ಹೆಚ್ಚು ರನ್
ನಾಯಕನಾಗಿ ಅಷ್ಟೇ ಅಲ್ಲದೆ ಆಟಗಾರನಾಗಿಯೂ ಇಯಾನ್ ಮಾರ್ಗನ್ ಸಾಧನೆ ಬಹು ಎತ್ತರದಲ್ಲಿದೆ. ಇಂಗ್ಲೆಂಡ್ ಏಕದಿನ ಮತ್ತು ಟಿ20ಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಆಟಗಾರನಾಗಿದ್ದದಾರೆ. 115 ಟಿ20 ಪಂದ್ಯಗಳಲ್ಲಿ 2458 ರನ್ ಮತ್ತು 225 ಏಕದಿನ ಪಂದ್ಯಗಳಲ್ಲಿ 6957ರನ್ ಸಿಡಿಸಿದ್ದಾರೆ. ಇಷ್ಟಲ್ಲದೆ ಏಕದಿನ ಮತ್ತು ಟಿ20ಯಲ್ಲಿ ಅತಿ ಹೆಚ್ಚು ಪಂದ್ಯವನ್ನಾಡಿದ ಇಂಗ್ಲೆಂಡ್ ಆಟಗಾರನಾಗಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು, ದೇಶೀಯ ಕ್ರಿಕೆಟ್‌ನಲ್ಲಿ ಲಂಡನ್ ಸ್ಪಿರಿಟ್ ತಂಡದ ನಾಯಕನಾಗಿ ಮುನ್ನಡೆಸಲಿರುವ ಇಯಾನ್ ಮಾರ್ಗನ್‌ಗೆ ಅಭಿಮಾನಿಗಳು, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.
ಕ್ರಿಕೆಟ್ ಆಡುವ ವಿಧಾನವನ್ನೇ ಬದಲಿಸಿದ್ದೀರಿ
ನೀವು ಎಂತಹ ಅದ್ಭುತ ವೃತ್ತಿಜೀವನವನ್ನು ಹೊಂದಿದ್ದೀರಿ. ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಜನರು ಯೋಚಿಸುವ ಮತ್ತು ಆಟವನ್ನು ಆಡುವ ವಿಧಾನವನ್ನು ಬದಲಾಯಿಸಿದ್ದೀರ. ನಿಮ್ಮ ಮುಂದಿನ ಅಧ್ಯಾಯಕ್ಕೆ ಶುಭ ಹಾರೈಸುತ್ತೇನೆ ಎಂದು ಐರ್ಲೆಂಡ್ ಮಾಜಿ ಕ್ರಿಕೆಟಿಗ ನಯಾಲ್ ಜಾನ್ ಒಬ್ರಾಯನ್ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಅನ್ನು ಶಾಶ್ವತವಾಗಿ ಬದಲಿಸಿದ್ದೀರಿ: ಇಸಿಬಿ
ನೀವು ಇಂಗ್ಲೆಂಡ್ ಕ್ರಿಕೆಟ್ ಆಡುವ ವಿಧಾನವನ್ನ ಶಾಶ್ವತವಾಗಿ ಬದಲಿಸಿದ್ದೀರಿ, ಒಬ್ಬ ನವೋದ್ಯಮಿ, ಓರ್ವ ಪ್ರೇರಕ, ಒಬ್ಬ ಚಾಂಪಿಯನ್. ನಿಮ್ಮ ಪರಂಪರೆಯು ಜೀವಂತವಾಗಿರುತ್ತದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಟ್ವೀಟ್ ಮಾಡಿದೆ.
ನಿವೃತ್ತಿ ಘೋಷಿಸಿ ಐದು ನಿಮಿಷದಲ್ಲಿ ಕಾಮೆಂಟೇಟರ್ ಆದ ಇಯಾನ್
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಐದು ನಿಮಿಷಗಳಲ್ಲಿ, ಈ ಬೇಸಿಗೆಯಲ್ಲಿ ನಡೆಯುವ ಎಲ್ಲಾ ಇಂಗ್ಲೆಂಡ್ ಪುರುಷರ ಟೆಸ್ಟ್ ಪಂದ್ಯಗಳಿಗೆ ಇಯಾನ್ ಮಾರ್ಗನ್ ತಮ್ಮ ಕಾಮೆಂಟರಿ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಸ್ಕೈ ಸ್ಪೋರ್ಟ್ಸ್ ಘೋಷಿಸಿದೆ ಎಂದು ಕ್ರಿಕೆಟ್ ಮತ್ತು ರಗ್ಬಿ ವಿಶೇಷ ಪ್ರತಿನಿಧಿ ವಿಲ್ ಮ್ಯಾಕ್ಫರ್ಸನ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications