ಭಾರತದ 'ಬಿ' ಟೀಮ್ ಪಾಕಿಸ್ತಾನವನ್ನು ಕೂಡ ಮಣಿಸಲಿದೆ ಎಂದ ದಾನಿಶ್ ಕನೇರಿಯಾ

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಸರಣಿ ಗೆದ್ದುಕೊಂಡಿದೆ. ಪ್ರಮುಖ ಆಟಗಾರರಿಲ್ಲದ ಭಾರತ ತಂಡದಲ್ಲಿ ಬಹುತೇಕ ಯುವ ಆಟಗಾರರೇ ತುಂಬಿಕೊಂಡಿದ್ದಾರೆ. ಈ ತಂಡ ಶ್ರೀಲಂಕಾ ನೆಲದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ಗಮನಸೆಳೆದಿದ್ದು ಶ್ರೀಲಂಕಾದ ಪ್ರಮುಖ ಆಟಗಾರರನ್ನು ಹೊಂದಿರುವ ತಂಡದ ವಿರುದ್ಧ ಸತತ ಎರಡನೇ ಗೆಲವು ಸಾಧಿಸಿ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಗೆಲುವಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನೀಶ್ ಕನೇರಿಯಾ ಪ್ರತಿಕ್ರಿಯಿಸಿದ್ದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿಯೂ ಅಸಾಧ್ಯ ಗೆಲುವನ್ನು ಪಡೆಯಲು ಭಾರತ ಯಶಸ್ವಿಯಾಗಿತ್ತು. ಈ ಗೆಲುವಿನ ಬಳಿಕ ಪಾಕಿಸ್ತಾನದ ಮಾಜಿ ಕ್ರಿಕೆಟರ್ ದಾನೀಶ್ ಕನೇರಿಯಾ ಭಾರತ ಈ ತಂಡ ಪಾಕಿಸ್ತಾನದ ಪೂರ್ಣ ಸಾಮರ್ಥ್ಯದ ತಂಡವನ್ನು ಕೂಡ ಮಣಿಸುವಷ್ಟು ಬಲಿಷ್ಠವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಪ್ರಶಂಸೆಗೆ ಅರ್ಹ
"ಭಾರತೀಯ ಕ್ರಿಕೆಟ್ ತಂಡ ನೀಡಿದ ಪ್ರದರ್ಶನದ ರೀತಿ, ರಾಹುಲ್ ದ್ರಾವಿಡ್ ಭಾರತೀಯ ತಂಡದೊಂದಿಗೆ ಕಾರ್ಯನಿರ್ವಹಿಸಿದ ರೀತಿಗೆ ಅವರು ಪ್ರಶಂಸೆಗೆ ಅರ್ಹರಾಗಿದ್ದಾರೆ. ಕುಲ್‌ದೀಪ್ ಯಾದವ್‌ಗೆ ಅವರು ಸ್ಪೂರ್ತಿಯನ್ನು ತುಂಬಿದ ರೀತಿಯನ್ನು ನೋಡಿದರೆ ಭಾರತದ ಈ ಬಿ ತಂಡ ಪಾಕಿಸ್ತಾನವನ್ನು ಕೂಡ ಮಣಿಸಲಿದೆ ಎಂದು ಭಾಸವಾಗುತ್ತದೆ" ಎಂದಿದ್ದಾರೆ ದಾನೀಶ್ ಕನೇರಿಯಾ.

ಐಪಿಎಲ್‌ನಿಂದ ಭಾರತಕ್ಕೆ ಬಲ
ಶ್ರೀಲಂಕಾ ತಂಡದ ವಿರುದ್ಧದ ಟಿ20 ಸರಣಿ ಭಾರತಕ್ಕೆ ಟಿ20 ವಿಶ್ವಕಪ್‌ಗೆ ಮುನ್ನ ನಡೆಯುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿದೆ. ಹಾಗಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳ ಕೊರತೆ ಕಾಡಲಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ಭಾರತ ಐಪಿಎಲ್‌ನ ಎರಡನೇ ಹಂತದ ಪಂದ್ಯಗಳನ್ನು ಟಿ20 ವಿಶ್ವಕಪ್‌ಗೆ ಮುನ್ನ ಯುಎಇನಲ್ಲಿಯೇ ಆಡಲಿದೆ. ಇದು ಭಾರತ ತಂಡಕ್ಕೆ ಹೆಚ್ಚಿನ ಬಲ ನೀಡಲಿದೆ ಎಂಬ ಅಭಿಪ್ರಾಯವನ್ನು ದಾನೀಶ್ ಕನೇರಿಯಾ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ನ ಫೈನಲಿಸ್ಟ್ ಹೆಸರು ಹೇಳಿದ ಕನೇರಿಯಾ
"ಟಿ20 ವಿಶ್ವಕಪ್‌ಗೂ ಮುನ್ನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡ ಭಾಗಿಯಾಗುತ್ತಿಲ್ಲ. ಆದರೆ ಐಪಿಎಲ್ ಅವರನ್ನು ಉತ್ತಮ ಸ್ಥಾನದಲ್ಲಿರುವಂತೆ ಮಾಡಲಿದೆ. ನನ್ನ ಪ್ರಕಾರ ಟಿ0 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಾಣಿಸಿಕೊಳ್ಳಲಿದೆ" ಎಂದು ದಾನೀಶ್ ಕನೇರಿಯಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications