9 ಸಿಕ್ಸರ್‌ಗಳೊಂದಿಗೆ ಸ್ಫೋಟಕ ಅರ್ಧಶತಕ ಚಚ್ಚಿದ ಎವಿನ್ ಲೆವಿಸ್!

ಸೇಂಟ್ ಲೂಸಿಯಾ: ಸೇಂಟ್ ಲೂಸಿಯಾದಲ್ಲಿರುವ ಡ್ಯಾರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 16) ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ಕೆರಿಬಿಯನ್ ತಂಡ ರೋಚಕ 16 ರನ್ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ವಿಂಡೀಸ್ 4-1ಯ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಎವಿನ್ ಲೆವಿಸ್ ವಿಶಿಷ್ಠ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ.
ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಸ್ಫೋಟಕ ಅರ್ಧ ಶತಕ, ಶೆಲ್ಡನ್ ಕಾಟ್ರೆಲ್ ಬೌಲಿಂಗ್ ಕೊಡುಗೆಯೊಂದಿಗೆ ವೆಸ್ಟ್ ಇಂಡೀಸ್ ತಂಡ ಪಂದ್ಯ ಗೆದ್ದು ಟಿ20ಐ ಸರಣಿಯಲ್ಲಿ ಪಾರಮ್ಯ ಮರೆದಿದೆ. ಜುಲೈ 20ರಿಂದ ಇತ್ತಂಡಗಳ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.

ಲೆವಿಸ್ ಸ್ಫೋಟಕ ಬ್ಯಾಟಿಂಗ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್, ಆ್ಯಂಡ್ರೆ ಫ್ಲೆಚರ್ 12, ಎವಿನ್ ಲೆವಿನ್ 79 (34), ಕ್ರಿಸ್ ಗೇಲ್ 21, ನಾಯಕ ನಿಕೋಲಸ್ ಪೂರನ್ 31, ಹೇಡನ್ ವಾಲ್ಶ್ 12 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 199 ರನ್ ಗಳಿಸಿತ್ತು. ಈ ವೇಳೆ ಲೆವಿಸ್ ಬ್ಯಾಟಿಂದ 4 ಫೋರ್, 9 ಸಿಕ್ಸರ್ ಸಿಕ್ಸರ್ ಗಳು ಸಿಡಿದಿದ್ದವು.

ಆಸ್ಟ್ರೇಲಿಯಾಕ್ಕೆ ಸೋಲು
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ನಾಯಕ ಆ್ಯರನ್ ಫಿಂಚ್ 34, ಮಿಚೆಲ್ ಮಾರ್ಷ್ 30, ಮೋಯ್ಸಸ್ ಹೆನ್ರಿಕ್ಸ್ 21, ಅಲೆಕ್ಸ್ ಕ್ಯಾರಿ 9, ಮ್ಯಾಥ್ಯೂ ವೇಡ್ 26, ಆ್ಯಂಡ್ರ್ಯೂ ಟೈ 15, ಮಿಚೆಲ್ ಸ್ವೆಪ್ಸನ್ 14 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 183 ರನ್ ಗಳಿಸಿ ಶರಣಾಯ್ತು.

ವಾಲ್ಶ್‌ಗೆ ಸರಣಿಶ್ರೇಷ್ಠ ಪ್ರಶಸ್ತಿ
ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಆ್ಯಡಂ ಝಂಪಾ 2, ಮಿಚೆಲ್ ಸ್ವೆಪ್ಸನ್ 1, ಆ್ಯಂಡ್ರ್ಯೂ ಟೈ 3, ಮಿಚೆಲ್ ಮಾರ್ಷ್ 2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಶೆಲ್ಡನ್ ಕಾಟ್ರೆಲ್ 3, ಆ್ಯಂಡ್ರೆ ರಸೆಲ್ 3, ಹೇಡನ್ ವಾಲ್ಶ್ 1 ವಿಕೆಟ್ ನಿಂದ ಗಮನ ಸೆಳೆದರು. ಎವಿನ್ ಲೆವಿಸ್ ಪಂದ್ಯಶ್ರೇಷ್ಠರಾಗಿ, ಹೇಡನ್ ವಾಲ್ಶ್ ಸರಣಿ ಶ್ರೇಷ್ಠರಾಗಿ ಮಿಂಚಿದರು.

ಲೆವಿಸ್ ಹೆಸರಿನಲ್ಲಿ ದಾಖಲೆ
ಕೊನೇ ಟಿ20ಐ ಪಂದ್ಯದಲ್ಲಿ ಎವಿನ್ ಲೆವಿಸ್ ಕೇವಲ 23 ಎಸೆತಗಳಲ್ಲಿ 50 ರನ್ ಸಾಧನೆ ತೋರಿದ್ದರು. ಅಷ್ಟೇ ಅಲ್ಲ, ವಿಶ್ವದಲ್ಲಿ ಟಿ20 ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಏಳನೇ ಬ್ಯಾಟ್ಸ್‌ಮನ್ ಆಗಿ ಲೆವಿಸ್ ದಾಖಲೆ ಕೂಡ ನಿರ್ಮಿಸಿದ್ದಾರೆ. 29ರ ಹರೆಯದ ಲೆವಿಸ್, 54 ಏಕದಿನ ಪಂದ್ಯಗಳಲ್ಲಿ 1791 ರನ್, 43 ಟಿ20ಐ ಪಂದ್ಯಗಳಲ್ಲಿ 1277 ರನ್, 16 ಐಪಿಎಲ್ ಪಂದ್ಯಗಳಲ್ಲಿ 430 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications