"ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ: PCB ಭದ್ರತೆಯ ಗ್ಯಾರಂಟಿ ನೀಡಲಿ"
ಭಾರತ ಕ್ರಿಕೆಟ್ ತಂಡ ಸದ್ಯ ಬಿಡುವಿನಲ್ಲಿದೆ. ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಆಟಗಾರರು ತಯಾರಿ ನಡೆಸಬೇಕಿದೆ. ಇದಾದ ಬಳಿಕ ಟೀಮ್ ಇಂಡಿಯಾಗೆ ಸಾಲು ಸಾಲು ಸರಣಿಗಳು ಎದುರಾಗುತ್ತವೆ. ಹೀಗಾಗಿ ಕೆಲವು ಆಟಗಾರರು ಕುಟುಂಬದ ಜೊತೆ ಸಮಯ ಸ್ಪೆಂಡ್ ಮಾಡುತ್ತಿದ್ದಾರೆ. ಈ ಮಧ್ಯೆ ಆ ಒಂದು ವಿಷಯ ಭಾರೀ ಚರ್ಚೆ ಆಗುತ್ತಿದೆ. ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಕಳಿಸುತ್ತಾ ಎಂಬ ದೊಡ್ಡ ಪ್ರಶ್ನೆ ಎದ್ದಿದೆ.
ಈ ವಿಚಾರವಾಗಿ ಭಾರತ ಕ್ರಿಕೆಟ್ ನಿಂಯತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ (ಪಿಸಿಬಿ) ನಡುವೆ ಶೀತಲ ಸಮರ ಆರಂಭವಾಗಿದೆ. ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿಗೆ ಕಳುಹಿಸುತ್ತದೋ ಇಲ್ಲವೋ ಎಂಬ ಬಗ್ಗೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಭದ್ರತಾ ಕಾರಣದಿಂದ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಸಹ ಹಿಂದೇಟು ಹಾಕುತ್ತಿದೆ.

ಬಿಸಿಸಿಐ ಬಯಸುವುದು ಏನು?
ಮುಂದಿನ ವರ್ಷದ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಭದ್ರತಾ ಕಾರಣದಿಂದ ಭಾರತ ಪಾಕ್ ಪ್ರವಾಸ ಮಾಡುವುದು ಡೌಟ್. 2022ರಲ್ಲಿ ಆಯೋಜಿಸಲಾಗಿದ್ದ ಏಷ್ಯಾ ಕಪ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಬಿಸಿಸಿಐ ಬಯಸುತ್ತಿದೆ. ಆದರೆ ಪಾಕ್ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ತಮ್ಮದೇ ದೇಶದಲ್ಲಿ ನಡೆಸಲು ಶ್ರಮಿಸುತ್ತಿದೆ.
ಪಿಸಿಬಿ ಸುರಕ್ಷತೆಯ ಭರವಸೆ ನೀಡಲಿ
ಈ ಬೆಳವಣಿಗೆಗಳ ನಡುವೆ ಪಾಕ್ ಮಾಜಿ ಕ್ರಿಕೆಟ್ ಆಟಗಾರ ಬಸಿತ್ ಅಲಿ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಮಾಜಿ ಆಟಗಾರ ಬಸಿತ್ ಅವರು, ಪಿಸಿಬಿ ಆಟಗಾರರ ಸುರಕ್ಷತೆಯ ಭರವಸೆ ನೀಡಲಿ ಎಂದು ಹೇಳಿದ್ದಾರೆ. ಅಲ್ಲದೆ ಪಿಸಿಬಿ ಬೇರೆ ತಂಡಗಳ ಆಟಗಾರರಿಗೆ ಏನು ಆಗುವುದಿಲ್ಲ. ಸುರಕ್ಷತೆಯಲ್ಲಿ ಯಾವುದೇ ಲೋಪ ಆಗುವುದಿಲ್ಲ ಎಂದು ಗ್ಯಾರಂಟಿ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪಾಕಿಸ್ತಾನ ಪ್ರವಾಸ ಬೆಳೆಸಲು ಈ ಹಿಂದೆ ಹಲವು ತಂಡಗಳು ಹಿಂದೇಟು ಹಾಕುತ್ತಿದ್ದವು. ಆದರೆ ಈಗ ದೊಡ್ಡ ತಂಡಗಳು ಸಹ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದ ವಿರುದ್ಧವೂ ಪಾಕ್‌ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.
ಸುರಕ್ಷತೆ ಆದ್ಯ ಕರ್ತವ್ಯ
ಬಸಿತ್ ಅಲಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಬಾಂಗ್ಲಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ನಂತರ ತಂಡಗಳು ಬರುತ್ತಿವೆ. ಈ ವೇಳೆ ಸುರಕ್ಷತೆಯ ಬಗ್ಗೆ ನಾವು ಗಮನ ಹರಿಸಬೇಕಿದೆ. ದೇವರು ಈ ಸರಣಿಯ ವೇಳೆ ಯಾವುದೇ ದುರ್ಘಟನೆ ಆಗದಂತೆ ನೋಡಿಕೊಳ್ಳಲಿ. ಒಂದು ವೇಳೆ ಯಾವದಾರರು ಸುರಕ್ಷತೆಯ ಲೋಪ ಕಂಡು ಬಂದಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈ ತಪ್ಪಲಿದೆ ಎಂದು ತಿಳಿಸಿದ್ದಾರೆ.
1996ರ ಏಕದಿನ ವಿಶ್ವಕಪ್ ಬಳಿಕ ಪಾಕಿಸ್ತಾನದಲ್ಲಿ ನಡೆಯಲಿರುವ ಮೊದಲ ಐಸಿಸಿ ಟೂರ್ನಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಗಿದೆ. 2009 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನವು ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದನ್ನು ನಿಷೇಧಿಸಿತು. ಹಲವು ವರ್ಷಗಳಿಂದ ಪಾಕಿಸ್ತಾನ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಡಬೇಕಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications