ಪಾಕಿಸ್ತಾನದಲ್ಲಿ ಸದ್ಯ ಪಿಎಸ್‌ಎಲ್ ನಡೆಯುತ್ತಿದೆ. ಈ ಲೀಗ್ ಮುಗಿದ ಬಳಿಕ ಬಾಂಗ್ಲಾದೇಶ ವಿರುದ್ಧ ಸರಣಿ ಆರಂಭವಾಗಲಿದೆ. ಈ ಸರಣಿಗೆ ಇನ್ನೇನು ಕೆಲವೇ ದಿನಗಳಲ್ಲಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ದೊಡ್ಡ ತೀರ್ಮಾನವನ್ನು ತೆಗೆದುಕೊಂಡಿದೆ. ತಂಡದಲ್ಲಿ ಖಾಲಿ ಇದ್ದ ಕೋಚ್ ಹುದ್ದೆಗೆ ಪಿಸಿಬಿ ಆರ್‌ಸಿಬಿ ಮಾಜಿ ಡೈರೆಕ್ಟರ್ ಅವರನ್ನು ನೇಮಕ ಮಾಡಿದೆ.
ಮೇ 25 ರಿಂದ ಬಾಂಗ್ಲಾದೇಶದ ವಿರುದ್ಧದ ಸರಣಿ ಆರಂಭವಾಗಲಿದೆ. ಈ ಸರಣಿಯ ವೇಳೆ 5 ಪಂದ್ಯಗಳ ಟಿ20 ಸರಣಿಯನ್ನು ತವರಿನಲ್ಲಿ ಆಡಲಾಗುತ್ತದೆ. ಇದಕ್ಕೂ ಮೊದಲು ಪಿಸಿಬಿ ಖಾಲಿ ಇದ್ದ ಕೋಚ್ ಹುದ್ದೆಗೆ ಪಿಸಿಬಿ ನೇಮಕ ಮಾಡಿದೆ. ಹೊಸ ಕೋಚ್ ಐಪಿಎಲ್‌ನ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರೇ ನ್ಯೂಜಿಲೆಂಡ ತಂಡದ ಮಾಜಿ ಆಟಗಾರ ಮೈಕ್ ಹೆಸ್ಸನ್.

ಸದ್ಯ ಇವರು ಪಿಎಸ್‌ಎಲ್‌ನಲ್ಲಿ ಕೋಚಿಂಗ್ ಮಾಡ್ತಾ ಇದ್ದಾರೆ. ಇವರು ಇಸ್ಲಾಮಾಬಾದ್ ಯುನೈಟೆಡ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಟಾರ್ ಕೋಚ್ ಗ್ಯಾರಿ ಕರ್ಸ್ಟನ್ ಅವರಿಂದ ತೆರವಾದ ಸ್ಥಾನಕ್ಕೆ ಪಿಸಿಬಿ ತಾತ್ಕಲಿಕ ಕೋಚ್ ನೇಮಕ ಮಾಡಿತ್ತು. ಪಿಸಿಬಿ ಮಧ್ಯಂತರ ಕೋಚ್ ಆಗಿ ಅಕಿಬ್ ಜಾವೇದ್ ಅವರನ್ನು 5 ತಿಂಗಳಿಗೂ ಮುನ್ನ ನೇಮಕ ಮಾಡಿತ್ತು. ಮೈಕ್ ಹೆಸ್ಸನ್ ಅವರಿಗೆ ಸದ್ಯ 50 ವರ್ಷ ಇವರಿಗೆ ತರಬೇತಿ ನೀಡಿದ ಅನುಭವ ಸಾಕಷ್ಟಿದೆ. ಇವರು ನ್ಯೂಜಿಲೆಂಡ್‌ನ ಮುಖ್ಯ ಕೋಚ್ ಆಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಇದಾದ ಬಳಿಕ ಇವರು ಆರ್‌ಸಿಬಿ ತಂಡದ ಪರ ಕಾಣಿಸಿಕೊಂಡಿದ್ದರು.
ಮೈಕ್ ಹೆಸ್ಸನ್ ಆರ್‌ಸಿಬಿ ತಂಡವನ್ನು 2019ರಲ್ಲಿ ಸೇರಿಕೊಂಡರು. ಇವರು 2023ರ ವರೆಗೆ ಆರ್‌ಸಿಬಿ ಜೊತೆಗೆ ಇದ್ದರು. ಇವರು ಆರ್‌ಸಿಬಿ ತಂಡದ ಜವಾಬ್ದಾರಿಯನ್ನು ಹೊತ್ತುಕೊಂಡಾಗ ತಂಡ ಸ್ಥಿರ ಪ್ರದರ್ಶನ ನೀಡಿತ್ತು. ಪಿಸಿಬಿ ಮೈಕ್ ಹೆಸ್ಸನ್ ಅವರ ನೇಮಕಾತಿಯನ್ನು ಘೋಷಿಸಿದೆ. ಆದರೆ ಇವರು ಎಷ್ಟು ವರ್ಷಗಳ ಕಾಲ ಕೋಚ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಹೆಸ್ಸನ್ ಅವರ ಒಪ್ಪಂದವು 2 ವರ್ಷಗಳ ಅವಧಿಗೆ ಎಂದು ನಂಬಲಾಗಿದೆ.

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ಕೋಚ್ ಮೈಕ್ ಹೆಸ್ಸನ್ ಅವರನ್ನು ಪಾಕಿಸ್ತಾನ ಪುರುಷರ ಸೀಮಿತ ಓವರ್‌ಗಳ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.