ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳು ದಿನವೂ ನಿರ್ಮಾಣ ಆಗುತ್ತವೆ. ರೆಕಾರ್ಡ್ ಬುಕ್‌ಗೆ ಈ ಆಟದಲ್ಲಿ ದಿನವೂ ಕೆಲಸ. ಆಟಗಾರರು ಸಹ ಮೈದಾನದಲ್ಲಿ ತಮ್ಮ ಧಮಾಕೆದಾರ ಆಟದಿಂದಲೇ ಅಭಿಮಾನಿಗಳ ಮನಕ್ಕೆ ಹತ್ತಿರವಾಗುತ್ತಾರೆ. ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿಲ್ಲ. ಈ ಬಿಡುವಿನ ವೇಳೆಯಲ್ಲಿ ಬೇರೆ ಬೇರೆ ದೇಶಗಳು ಲೀಗ್ ಆಯೋಜನೆ ಮಾಡುತ್ತಿವೆ. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಆಯೋಜನೆ ಗೊಂಡಿತ್ತು. ದಕ್ಷಿಣ ಆಫ್ರಿಕಾದಲ್ಲಿ ಎಸ್‌ಎ20 2025 ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಿದ್ದಾರೆ. ಆರ್‌ಸಿಬಿ ಪರ ಆಡಿದ ಆಟಗಾರ ಸಹ ಈ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಎಸ್‌ಎ20 2025ರ ಟೂರ್ನಿಯಲ್ಲಿ ಸೋಮವಾರ ಡರ್ಬನ್ ಸೂಪರ್ ಜೈಂಟ್ಸ್ ಹಾಗೂ ಪರ್ಲ್ ರಾಯಲ್ಸ್ ತಂಡಗಳ ನಡುವೆ ಕಾದಾಟ ನಡೆಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಡರ್ಬನ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 143 ರನ್ ಕಲೆ ಹಾಕಿತು. ತಂಡದ ಪರ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ (45), ಮಾರ್ಕಸ್ ಸ್ಟೋಯ್ನಿಸ್ (ಅಜೇಯ 55 ರನ್) ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ಪರ್ಲ್ ತಂಡ 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 147 ರನ್ ಸೇರಿಸಿತು.

ರಾಯಲ್ಸ್ ತಂಡದ ಪರ ರೂಬಿನ್ ಹರ್ಮನ್ (59 ರನ್) ಮತ್ತು ಲುಹಾನೆ ಡ್ರಿಸ್ ಪ್ರಿಟೋರಿಯಸ್ (43 ರನ್) ತಂಡದ ಗೆಲುವಿನಲ್ಲಿ ಮಿಂಚಿದರು. ಇದೇ ವೇಳೆ ದಿನೇಕ್ ಕಾರ್ತಿಕ್ ಸಹ ತಮ್ಮ ಚಿಕ್ಕ ಇನಿಂಗ್ಸ್‌ನಿಂದ ಅಭಿಮಾನಿಗಳ ಮನ ಗೆದ್ದರು. ಇವರು 15 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ದಿನೇಶ್ ಕಾರ್ತಿಕ್ ಇತಿಹಾಸದ ಪುಟಕ್ಕೆ ಎಂಟ್ರಿ ಪಡೆದರು.
ದಿನೇಶ್ ಕಾರ್ತಿಕ್ ಈ ಇನಿಂಗ್ಸ್ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದರು. ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಇವರು 7432 ರನ್ ಸಿಡಿಸಿದ್ದರು. ಈಗ ಈ ದಾಖಲೆಯನ್ನು ದಿನೇಶ್ ಕಾರ್ತಿಕ್ ಮುರಿದಿದ್ದಾರೆ. ಸದ್ಯ ದಿನೇಶ್ ಬುಟ್ಟಿಯಲ್ಲಿ 7451 ರನ್‌ಗಳಿವೆ. ದಿನೇಶ್ ಕಾರ್ತಿಕ್ 409 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ವೇಳೆ 34 ಅರ್ಧಶತಕಗಳು ಸೇರಿವೆ. ಇವರು ಉತ್ತಮ ವಿಕೆಟ್ ಕೀಪರ್ ಸಹ ಹೌದು. ಕಳೆದ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಇವರು ಆರ್‌ಸಿಬಿ ಪರ ಮ್ಯಾಚ್ ಫಿನಿಷರ್ ರೂಪದಲ್ಲಿ ಕಾಣಿಸಿಕೊಂಡು ಸೈ ಎನಿಸಿದ್ದರು.

ವಿರಾಟ್ ಕೊಹ್ಲಿ - 12886 ರನ್
ರೋಹಿತ್ ಶರ್ಮಾ - 11830 ರನ್
ಶಿಖರ್ ಧವನ್ - 9797 ರನ್
ಸುರೇಶ್ ರೈನಾ - 8654 ರನ್
ಸೂರ್ಯಕುಮಾರ್ ಯಾದವ್ - 7887 ರನ್