For Quick Alerts
ALLOW NOTIFICATIONS  
For Daily Alerts
 

RCB: ಆರ್‌ಸಿಬಿ ಮಾಲೀಕತ್ವ ಬದಲಾವಣೆಯ ಅಗತ್ಯವಿದೆ; ಟೆನ್ನಿಸ್ ತಾರೆ ಮಹೇಶ್ ಭೂಪತಿ

ಸೋಮವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 30ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ದೌರ್ಬಲ್ಯಗಳು ಮತ್ತೊಮ್ಮೆ ಪ್ರದರ್ಶನಗೊಂಡವು.

ಆತಿಥೇಯ ಆರ್‌ಸಿಬಿ ತಂಡದ ಕಳಪೆ ಬೌಲಿಂಗ್ ದಾಳಿಯ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್‌ಗಳು ತನ್ನ 20 ಓವರ್‌ಗಳಲ್ಲಿ ಅಸಾಧಾರಣ 287 ರನ್‌ಗಳನ್ನು ಕಲೆಹಾಕಿತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ.

Ex-Tennis Star Mahesh Bhupathi Calls for Changes in RCB Team Ownership After 5 Consecutive Losses

ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರ ವೀರೋಚಿತ ಪ್ರಯತ್ನಗಳ ಹೊರತಾಗಿಯೂ, ಆರ್‌ಸಿಬಿ ತಂಡ ಅಂತಿಮವಾಗಿ 25 ರನ್‌ಗಳಿಂದ ಸೋಲನುಭವಿಸಿತು. ಐಪಿಎಲ್ 2024ರಲ್ಲಿ ಸತತ ಐದನೇ ಹಾಗೂ ಒಟ್ಟಾರೆ ಆರನೇ ಸೋಲನ್ನು ಕಂಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಪೆ ಪ್ರದರ್ಶನದ ನಂತರ, ಭಾರತೀಯ ಟೆನ್ನಿಸ್ ಪಟು ಮಹೇಶ್ ಭೂಪತಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹೃತ್ಪೂರ್ವಕ ಮನವಿಯೊಂದನ್ನು ಮಾಡಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿಯನ್ನು ಪುನರ್‌ಯೌವನಗೊಳಿಸಬಲ್ಲ ಹೊಸ ಮಾಲೀಕರಿಗೆ ಮಾರಾಟವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಟಿಪ್ಪಣಿಯನ್ನು ಬರೆದಿದ್ದಾರೆ.

"ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಆರ್‌ಸಿಬಿ ಫ್ರಾಂಚೈಸಿಯ ಮಾರಾಟವನ್ನು ಹೊಸ ಮಾಲೀಕರಿಗೆ ಜಾರಿಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಹೊಸ ಮಾಲೀಕರು ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿ ವಹಿಸುತ್ತಾರೆ," ಎಂದು ಭಾರತೀಯ ಟೆನ್ನಿಸ್ ತಾರೆ ಮಹೇಸ್ ಭೂಪತಿ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಂದ್ಯದ ಸಂಕ್ಷಿಪ್ತ ವರದಿ
ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ತನ್ನದೇ ಹಿಂದಿನ ದಾಖಲೆಯನ್ನು ಮೀರಿಸಿತು. ಆರ್‌ಸಿಬಿ ಕಳಪೆ ಬೌಲಿಂಗ್ ಲೈನ್‌ಅಪ್ ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು.

ಟ್ರಾವಿಸ್ ಹೆಡ್ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ನಲ್ಲಿ ಚೊಚ್ಚಲ ಮತ್ತು ಐಪಿಎಲ್‌ನ ನಾಲ್ಕನೇ ವೇಗದ ಶತಕ ಕೇವಲ 39 ಎಸೆತಗಳಲ್ಲಿ ಬಂದಿತು. ಇದು ತಮ್ಮ ತಂಡವನ್ನು ಕಮಾಂಡಿಂಗ್ ಮೊತ್ತಕ್ಕೆ ಮುನ್ನಡೆಸಿತು. ಮುಂಬೈ ಇಂಡಿಯನ್ಸ್ ವಿರುದ್ಧ 18 ದಿನಗಳ ಮೊದಲು ತಮ್ಮ ಹಿಂದಿನ ದಾಖಲೆ 277 ರನ್‌ಗಳ ದಾಖಲೆಯನ್ನು ಹಿಂದಿಕ್ಕಿತು.

ನಂತರ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆಕ್ರಮಣಕಾರಿ ಬ್ಯಾಟಿಂಗ್‌ನ ದಿಟ್ಟ ಆರಂಭದ ಹೊರತಾಗಿಯೂ, ಆರ್‌ಸಿಬಿ ತಂಡ 5 ವಿಕೆಟ್‌ಗೆ 122 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಸನ್ ರೈಸರ್ಸ್ ಹೈದರಾಬಾದ್ ಬೌಲರ್‌ಗಳನ್ನು ಸ್ಫೋಟಕವಾಗಿ ಬ್ಯಾಟಿಂಗ್ ಮಾಡಿದರು. ಈ ಮೂಲಕ 83 ರನ್‌ಗಳ ಸಾಹಸದಿಂದ ತಮ್ಮ ಮರು ಹೋರಾಟವನ್ನು ಮುನ್ನಡೆಸಿದರು. ದಿನೇಶ್ ಕಾರ್ತಿಕ್ ವೀರಾವೇಶದ ಹೊರತಾಗಿಯೂ, ಆರ್‌ಸಿಬಿ ಬೃಹತ್ ಮೊತ್ತದ ಚೇಸಿಂಗ್‌ನಲ್ಲಿ ಕೇವಲ 262 ರನ್‌ಗಳನ್ನು ಮಾತ್ರ ಗಳಿಸಿ 25 ರನ್‌ಗಳಿಂದ ಸೋಲು ಕಂಡಿತು.

Story first published: Tuesday, April 16, 2024, 12:32 [IST]
Other articles published on Apr 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+