ಸಚಿನ್ ಜೊತೆ ಡಿನ್ನರ್ ಮಾಡಲು ಇಲ್ಲಿದೆ ಅವಕಾಶ!
ಮೆಲ್ಬೋರ್ನ್, ಫೆ.18: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಕಾಣಲು, ಅವರ ಹಸ್ತಾಕ್ಷರ ಪಡೆಯಲು ಹಾತೊರೆಯುವ ಅಭಿಮಾನಿಗಳಿಗೆ ಇಲ್ಲೊಂದು ಬಂಪರ್ ಆಫರ್ ಇದೆ. ಸಿಡ್ನಿಯ ಜನಪ್ರಿಯ ರೆಸ್ಟೋರೆಂಟ್ ವೊಂದು ಸಚಿನ್ ಜೊತೆ ಡಿನ್ನರ್ ಮಾಡುವ ಅವಕಾಶ ಘೋಷಿಸಿದೆ.
ಮಾಸ್ಟರ್ ಬ್ಲಾಸ್ಟರ್ ಅವರೊಂದಿಗೆ ಡಿನ್ನರ್ ಮಾಡಲು 1,500 ರಿಂದ 3,000 ಆಸ್ಟ್ರೇಲಿಯನ್ ಡಾಲರ್ ನೀಡಿದರೆ ಈ ಅಪೂರ್ವ ಅವಕಾಶ ನಿಮ್ಮದಾಗುತ್ತದೆ ಎಂದು ಪ್ರಕಟಿಸಿದೆ.
ವಿಶ್ವಕಪ್ 2015ರ ಟೂರ್ನಿಯಲ್ಲಿ ಫೆ.22ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದ್ದು ಈ ಪಂದ್ಯ ನಡೆದ ನಾಲ್ಕು ದಿನಕ್ಕೆ ಫೆ.26ರಂದು ವಿಐಪಿ ಡಿನ್ನರ್ ಆಯೋಜಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ವೀಕ್ಷಿಸಲು ಆಸ್ಟ್ರೇಲಿಯಾಕ್ಕೆ ಸಚಿನ್ ತೆಂಡೂಲ್ಕರ್ ಅವರು ಬರುತ್ತಿದ್ದಾರೆ.

ಎಂಟು ಟೇಬಲ್ ಗಳಲ್ಲಿ ಡಿನ್ನರ್ ಆಯೋಜಿಸಲಾಗಿದ್ದು ಆಹ್ವಾನಿತರೊಂದಿಗೆ ಸಚಿನ್ ಅವರು ಡಿನ್ನರ್ ಮಾಡಲಿದ್ದಾರೆ. ನಂತರ ಕಾಕ್ ಟೈಲ್ ಹಾಗೂ ಡ್ರಿಂಕ್ಸ್ ತೆಗೆದುಕೊಳ್ಳುವಾಗ ಸಚಿನ್ ಜೊತೆ ಅರ್ಧ ಗಂಟೆಗಳ ಕಾಲ ಕಳೆಯಬಹುದಾಗಿದೆ. ಇದಕ್ಕಾಗಿ 3000 ಆಸ್ಟ್ರೇಲಿಯನ್ ಡಾಲರ್ಸ್ ತೆರಬೇಕಾಗುತ್ತದೆ.
ಈ ಡಿನ್ನರ್ ಕಾರ್ಯಕ್ರಮದ ವೇಳೆ ಸಚಿನ್ ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ..ಕೆಲವು ಕ್ರಿಕೆಟ್ ಸಂಬಂಧಿತ ವಸ್ತುಗಳನ್ನು ಹರಾಜು ಹಾಕಲಾಗುತ್ತಿದ್ದು, ಸಚಿನ್ ಅವರು ತಮ್ಮ ಹಸ್ತಾಕ್ಷರ ನೀಡಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
ಈ ಡಿನ್ನರ್ ಮೂಲಕ ಸಂಗ್ರಹವಾಗುವ ಹಣವನ್ನು ಸಚಿನ್ ಅವರ ಸಾಮಾಜಿಕ ಕಳಕಳಿ ಟ್ರಸ್ಟ್ ಗೆ ನೀಡಲಾಗುತ್ತದೆ. ಮಾರ್ಚ್ ಅಂತ್ಯಕ್ಕೆ ವಿಶ್ವಕಪ್ ಫೈನಲ್ಸ್ ವೇಳೆಗೆ ಇದೇ ರೀತಿ ಸಚಿನ್ ಜೊತೆಗೆ ಡಿನ್ನರ್ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications