Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಕ್ಕೆ ವೆಸ್ಟ್ ಇಂಡೀಸ್ ಕಠಿಣ ಸ್ಪರ್ಧೆಯೊಡ್ಡಲಿದೆ: ವಿವ್ ರಿಚರ್ಡ್ಸ್

Expect Windies to give tough competition, says Viv Richards

ನವದೆಹಲಿ, ಜುಲೈ 29: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾಕ್ಕೆ ಆತಿಥೇಯರು ಕಠಿಣ ಸವಾಲೊಡ್ಡಲಿದ್ದಾರೆ ಎಂದು ವಿಂಡೀಸ್ ಕ್ರಿಕೆಟ್ ದಂತಕತೆ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ. ಜುಲೈ 3ರಿಂದ ಕೊಹ್ಲಿ ಬಳಗ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

'ಭಾರತ-ವೆಸ್ಟ್ ಇಂಡೀಸ್ ಸರಣಿಯಲ್ಲಿ ಸ್ಫೋಟಕ ಪ್ರದರ್ಶನಗಳು ಕಾಣಸಿಗಲಿವೆ. ಈ ಸಮಯದಲ್ಲಿ ನಾನು ಸರಣಿಯಲ್ಲಿ ಕಡಿಮೆಯೇನನ್ನೂ ನಿರೀಕ್ಷಿಸುತ್ತಿಲ್ಲ. ವೆಸ್ಟ್ ಇಂಡೀಸ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವುದರಿಂದ ಭಾರತಕ್ಕೆ ಕಠಿಣ ಸ್ಪರ್ಧೆ ನೀಡುವುದನ್ನು ಎದುರು ನೋಡುತ್ತಿದ್ದೇನೆ,' ಎಂದು ಸೋನಿ ಪಿಕ್ಚರ್ ನೆಟ್ವರ್ಕ್‌ ಜೊತೆ ಮಾತನಾಡುತ್ತ ರಿಚರ್ಡ್ಸ್ ಹೇಳಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಭಾರತ 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು ಐಸಿಸಿ ಚಾಂಪಿಯನ್‌ಷಿಪ್ ಅಂಗವಾಗಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟಿ20ಯಿಂದ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ. ಭಾರತ ವಿರುದ್ಧದ ಟಿ20ಗೆ ವಿಂಡೀಸ್ ಪ್ರಕಟಿಸಿರುವ ತಂಡವನ್ನು ಗಮನಿಸಿದರೆ ವಿವ್ ರಿಚರ್ಡ್ಸ್ ಮಾತು ನಿಜವೆನಿಸುವಂತಿದೆ.

ಸೋನಿ ಜೊತೆ ರಿಚರ್ಡ್ಸ್ ಮಾತನಾಡುವಾಗ ಬಳಿಯಲ್ಲಿದ್ದ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, 'ನನ್ನ ಟೆಸ್ಟ್ ಕ್ರಿಕೆಟ್ ವೃತ್ತಿ ಆರಂಭವಾಗಿದ್ದೇ ಅಲ್ಲಿಂದವಾದ್ದರಿಂದ ವೆಸ್ಟ್ ಇಂಡೀಸ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ,' ಎಂದರು. ಗವಾಸ್ಕರ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದು 1971ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ.

Story first published: Monday, July 29, 2019, 18:47 [IST]
Other articles published on Jul 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+