ಯುವರಾಜ್ ಸಿಂಗ್ ಒಂದು ರನ್ ಗೆ 6.45 ಲಕ್ಷ ರು!
ನವದೆಹಲಿ, ಏ. 27: ಬೌಂಡರಿ ಮತ್ತು ಸಿಕ್ಸರ್ ಗೆ ಸಾವಿರ, ಹತ್ತು ಸಾವಿರ ಬಹುಮಾನ ನೀಡುವುದನ್ನು ನೋಡಿದ್ದೇವೆ ಮತ್ತು ನೋಡುತ್ತಿದ್ದೇವೆ. ಆದರೆ ಇಲ್ಲಿ ಒಂದೊಂದು ರನ್ ಗೆ ಕೊಟ್ಟಿದ್ದು ಬರೋಬ್ಬರಿ 6.5 ಲಕ್ಷ ರು!
ಯುವರಾಜ್ ಸಿಂಗ್ ಬ್ಯಾಟಿಂದ ಐಪಿಎಲ್ ನಲ್ಲಿ ರನ್ ಹೊಳೆ ಹರಿಯುತ್ತಯಿಲ್ಲ. ಆದರೆ ಅವರನ್ನು ಖರೀದಿಸಿದ ಡೆಲ್ಲಿ ಡೇರ್ ಡೇವಿಲ್ಸ್ 16 ಕೋಟಿ ರು ಹಣವನ್ನು ನೀರಿನಂತೆ ಖರ್ಚು ಮಾಡಿತ್ತು.[ಕರ್ನಾಟಕದ ಮಾಯಾಂಕ್ ರನ್ನು ಯುವಿ ಹೊಗಳಿದ್ದೇಕೆ?]

ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾಗಿದ್ದ ಆಲ್ ರೌಂಡರ್ ಆಟ ಮಂಕಾಗಿದೆ. ಕಳೆದ ಏಳು ಇನಿಂಗ್ಸ್ ಗಳಿಂದ ಏಡಗೈ ಬ್ಯಾಟ್ಸ್ ಮನ್ ಗಳಿಸಿರುವುದು ಕೇವಲ 124 ರನ್. ತಂಡ ಈಗಾಗಲೇ ಪಂದ್ಯಾವಳಿಯ ಅರ್ಧ ದಾರಿಯನ್ನು ಸವೆಸಿದ್ದು ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯುವುದು ಕಷ್ಟವೆಂದೇ ಹೇಳಬಹುದು.
ಇದು ಕೇವಲ ಬ್ಯಾಟಿಂಗ್ ವೊಂದಕ್ಕೆ ಸಂಬಂಧಿಸಿದ ಸಂಗತಿ ಅಲ್ಲ ಎಂದೇ ಇಟ್ಟುಕೊಳ್ಳೋಣ. ಮೂರು ಓವರ್ ಬೌಲ್ ಮಾಡಿರುವ ಯುವರಾಜ್ 30 ರನ್ ನೀಡಿದ್ದಾರೆ. ಆದರೆ ಅವರ ಸ್ಫೋಟಕ ಬ್ಯಾಟಿಂಗ್ ಮಾಯವಾಗಿದೆ. [ವಿಶ್ವಕಪ್ ತಂಡದಿಂದ ಯುವರಾಜ್ ಹೊರ ಹಾಕಿದ್ದು ಯಾರು?]
ಐಪಿಎಲ್ ನಲ್ಲಿ ತಂಡವೊಂದು ಮೊದಲ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಲಿದೆ. ಅಂದರೆ ಯುವರಾಜ್ ಅವರಿಗೆ 14 ಪಂದ್ಯಕ್ಕೆ 16 ಕೋಟಿ ನೀಡಲಾಗಿದೆ. ಈಗಾಗಲೇ ಏಳು ಪಂದ್ಯಗಳು ಮುಗಿದಿದ್ದು ಅರ್ಧ ಹಣ ಸಂದಾಯವಾದಂತಾಗಿದೆ. ಆ ಲೆಕ್ಕದಲ್ಲಿ ಹೇಳುವುದಾರೆ ಅವರು ಗಳಿಸಿದ ಒಂದು ರನ್ ಗೆ 6,45,161 ರೂ ನೀಡಲಾಗಿದೆ!
16 ಕೋಟಿ ಹರಾಜಿನ ಬಗ್ಗೆ ಇತ್ತೀಚೆಗೆ ಸ್ವತಃ ಯುವರಾಜ್ ಸಿಂಗ್ ಮಾತನಾಡಿದ್ದರು. ಹರಾಜು ನಡೆಯುವಾಗ ನಾನು ನಿದ್ರೆ ಮಾಡುತ್ತಿದ್ದೆ. ಯಾರ ಬಳಿಯೂ ನನಗೆ 16 ಕೋಟಿ ನೀಡಿ ಎಂದು ಕೇಳಿಕೊಂಡಿರಲಿಲ್ಲ ಎಂದು ತಿರುಗೇಟು ನೀಡಿದ್ದರು.
ಕಳೆದ ವರ್ಷ ವಿಜಯ್ ಮಲ್ಯ 14 ಕೋಟಿ ರೂ. ನೀಡಿ ಯುವರಾಜ್ ಅವರನ್ನು ಬೆಂಗಳೂರು ತಂಡಕ್ಕೆ ಖರೀದಿ ಮಾಡಿದ್ದರು. ಒಟ್ಟು 14 ಪಂದ್ಯಗಳಿಂದ ಯುವರಾಜ್ 376 ರನ್ ಗಳಿಸಿದ್ದರು. ಅಲ್ಲದೇ 5 ವಿಕೆಟ್ ಸಹ ಕಿತ್ತಿದ್ದರು.
ಯುವರಾಜ್ ಸಿಂಗ್ ಸ್ಕೋರ್ ಕಾರ್ಡ್
* ಚೆನ್ನೈ ವಿರುದ್ಧ 9 ರನ್
* ರಾಜಸ್ಥಾನ ವಿರುದ್ಧ 27 ರನ್
*ಪಂಜಾಬ್ ವಿರುದ್ಧ 54 ರನ್
* ಹೈದ್ರಾಬಾದ್ ವಿರುದ್ಧ 9 ರನ್
* ಕೋಲ್ಕತ್ತಾ ವಿರುದ್ಧ 21 ರನ್
* ಮುಂಬೈ ವಿರುದ್ಧ 2 ರನ್
* ಆರ್ ಸಿಬಿ ವಿರುದ್ಧ 2 ರನ್
ಒಟ್ಟು ಏಳು ಇನಿಂಗ್ಸ್ ನಿಂದ 124 ರನ್ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications