For Quick Alerts
ALLOW NOTIFICATIONS  
For Daily Alerts
 

IND vs PAK: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತ ಕೇಸರಿ ಜೆರ್ಸಿ ಧರಿಸಿ ಆಡಲಿದೆಯೇ? ಇಲ್ಲಿದೆ ಮಾಹಿತಿ

ಬಹು ನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶ್ವ ಕ್ರಿಕೆಟ್‌ನಲ್ಲಿನ ಶ್ರೇಷ್ಠ ಪೈಪೋಟಿ ಎಂದು ಹೇಳುವ ಏಷ್ಯಾದ ಎರಡು ಬಲಿಷ್ಠ ತಂಡಗಳ ಮುಖಾಮುಖಿಯನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Fact Check: Is India Wearing Saffron Jersey Against Pakistan in the World Cup Match?

ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ಸಾರ್ವಕಾಲಿಕ ಹೆಚ್ಚಿನ ವಿಮಾನ ಟಿಕೆಟ್ ದರ ಮತ್ತು ವಸತಿ ದರಗಳ ಹೆಚ್ಚಳದ ಹೊರತಾಗಿಯೂ ದೊಡ್ಡ ಎನ್‌ಕೌಂಟರ್‌ಗೆ ಸಾಕ್ಷಿಯಾಗಲು ಕ್ರಿಕೆಟ್ ಅಭಿಮಾನಿಗಳು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ.

ಹೈ-ವೋಲ್ಟೇಜ್ ಪಂದ್ಯಕ್ಕೆ ಕೇವಲ ನಾಲ್ಕೇ ದಿನಗಳು ಬಾಕಿ ಇರುವಾಗ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕಿತ್ತಳೆ ಅಥವಾ ಕೇಸರಿ ಬಣ್ಣದ ಜೆರ್ಸಿಯನ್ನು ಧರಿಸಿ ಆಡಲಿದೆ ಎಂಬ ವದಂತಿ ವ್ಯಾಪಕವಾಗಿದೆ.

ಗಮನಾರ್ಹವಾಗಿ, 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಪಂದ್ಯಕ್ಕಾಗಿ ಭಾರತ ತಂಡ ವಿಶೇಷ ಜೆರ್ಸಿಯನ್ನು ಹೊಂದಿತ್ತು, ಇದು ನೇರಳೆ ಬಣ್ಣದೊಂದಿಗೆ ಕಿತ್ತಳೆ ಬಣ್ಣವನ್ನು ಸಹ ಹೊಂದಿತ್ತು.

Fact Check: Is India Wearing Saffron Jersey Against Pakistan in the World Cup Match?

ಆದಾಗ್ಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಆಶಿಶ್ ಶೆಲಾರ್ ಹೇಳಿದಂತೆ, ಈ ವಿಶ್ವಕಪ್‌ನಲ್ಲಿ ಭಾರತ ತಂಡ ಅಂತಹ ಯಾವುದೇ ಜೆರ್ಸಿಯನ್ನು ಧರಿಸುವುದಿಲ್ಲ. ರೋಹಿತ್ ಶರ್ಮಾ ನಾಯಕತ್ವದ ತಂಡವು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ತಮ್ಮ ಸಾಮಾನ್ಯ ನೀಲಿ ಬಣ್ಣದ ಜೆರ್ಸಿಯನ್ನು ಧರಿಸುವುದನ್ನು ಕಾಣಬಹುದು ಎಂದಿದ್ದಾರೆ.

"ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಪರ್ಯಾಯ ಜೆರ್ಸಿಯನ್ನು ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬ್ಲೂ ಜೆರ್ಸಿಯಲ್ಲಿ ಭಾರತ ತಂಡ ಕಣಕ್ಕಿಳಿಯದೆ," ಎಂದು ಆಶಿಶ್ ಶೆಲಾರ್ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಸದ್ಯ ಭಾರತೀಯ ಕ್ರಿಕೆಟಿಗರು ಅಭ್ಯಾಸದ ಅವಧಿಯಲ್ಲಿ ಕಿತ್ತಳೆ ಅಥವಾ ಕೇಸರಿ ಬಣ್ಣದ ಟಿ-ಶರ್ಟ್ ಧರಿಸಿರುವುದನ್ನು ಕಾಣಬಹುದು. ಆದಾಗ್ಯೂ, ಆ ಜರ್ಸಿಯು ಪಂದ್ಯ-ಪೂರ್ವ ಅಭ್ಯಾಸಕ್ಕಾಗಿ ಮಾತ್ರ ಇರುತ್ತದೆ ಮತ್ತು ಸಾಂಪ್ರದಾಯಿಕ ನೀಲಿ ಬಣ್ಣದ ಜೆರ್ಸಿಯನ್ನು ಪಂದ್ಯಗಳ ವೇಳೆ ಧರಿಸಲಾಗುತ್ತದೆ.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ವಿಶ್ವಕಪ್ ಅಭಿಯಾನವನ್ನು ಗೆಲುವಿನಿಂದ ಆರಂಭಿಸಿವೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 81 ರನ್‌ಗಳಿಂದ ನೆದರ್ಲ್ಯಾಂಡ್ಸ್ ತಂಡವನ್ನು ಸೋಲಿಸಿದರೆ, ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ದಾಖಲೆ

50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದೆ. ಐಸಿಸಿ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಪರಸ್ಪರ ಭೇಟಿಯಾದ ಎಲ್ಲಾ 7 ಸಂದರ್ಭಗಳಲ್ಲಿ ಭಾರತ ಗೆಲುವು ಸಾಧಿಸಿ ಅಜೇಯವಾಗಿದೆ.

ಹೀಗಾಗಿ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಭಾರತ ತಂಡದ ವಿರುದ್ಧ ಅವರದೇ ನೆಲದಲ್ಲಿ ಸೋಲಿನ ಸರಣಿಯನ್ನು ಕೊನೆಗೊಳಿಸಲು ತವಕದಲ್ಲಿದೆ. ಮತ್ತೊಂದೆಡೆ, ಭಾರತ ತಂಡ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಮತ್ತು ತನ್ನ ಗೆಲುವಿನ ಸರಣಿಯನ್ನು 8-0 ಗೆ ವಿಸ್ತರಿಸಲು ಎದುರು ನೋಡುತ್ತಿದೆ.

Story first published: Monday, October 9, 2023, 19:23 [IST]
Other articles published on Oct 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+