ವಿಂಡೀಸ್ ಕ್ರಿಕೆಟರ್ ಕೀರನ್ ಪೊಲಾರ್ಡ್‌ಗೆ ಅಪಘಾತ, ಸಾವು?!: Fact Check

ನವದೆಹಲಿ: ವೆಸ್ಟ್ ಇಂಡೀಸ್‌ನ ನಿಯಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್ ಸತ್ತಿದ್ದಾರೆ. ಕಾರು ಅಪಘಾತಕ್ಕೀಡಾಗಿದ್ದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹಾಲಿ ಚಾಂಪಿಯನ್ಸ್ ತಂಡ ಮುಂಬೈ ಇಂಡಿಯನ್ಸ್‌ನ (ಎಂಐ) ಉಪನಾಯಕ ಕೊನೆಯುಸಿರೆಳೆದಿದ್ದಾರೆ ಎಂದೆಲ್ಲ ಸುದ್ದಿ ಹರಡಿತ್ತು.
ತಾನು ಸತ್ತಿದ್ದೇನೆ ಎಂದು ಸುದ್ದಿ ಹರಡುತ್ತಲೇ ಸ್ವತಃ ಕೀರನ್ ಪೊಲಾರ್ಡ್ ಅವರೇ ಗಾಬರಿಗೆ ಬಿದ್ದರೇನೋ. ಯಾಕೆಂದರೆ ಪೊಲಾರ್ಡ್‌ಗೆ ಏನೂ ಆಗಿಲ್ಲ. ಅವರೀಗ ಅಬುಧಾಬಿ ಟಿ10 ಲೀಗ್‌ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕೆ ನಾಯಕನಾಗಿ ಆಡುತ್ತಿದ್ದಾರೆ.
ಭಾರತದಲ್ಲಿ ದಿಕ್ಕು ತಪ್ಪಿಸುವ, ತಿರುಚಿ ಸುದ್ದಿ ಮಾಡುವ ಫೇಕ್ ಮೀಡಿಯಾಗಳ ಹಾವಳಿ ಜಾಸ್ತಿ. ಅದರಲ್ಲೂ ಯೂಟ್ಯೂಬ್ ಚಾನೆಲ್‌ಗಳು ವ್ಯೂಸ್‌ಗೋಸ್ಕರ ಕೆಲವೊಮ್ಮೆ ತಲೆ ಬುಡವಿಲ್ಲ ಸುದ್ದಿ, ಗಾಳಿ ಸುದ್ದಿಯನ್ನು ಹಬ್ಬಿಸೋದಿದೆ. ಇದೂ ಹೀಗೆಯೇ. ಕಾರು ಅಪಘಾತವಾಗಿ 33ರ ಹರೆಯದ ಪೊಲಾರ್ಡ್ ಸತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿತ್ತು.
ಅದಾಗಿ ಸ್ವಲ್ಪ ಸಮಯದಲ್ಲೇ ಅದು ಸುಳ್ಳು ಸುದ್ದಿಯೆಂದು ಗೊತ್ತಾಗಿದೆ. ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಹರಡಿಯಾಗಿತ್ತು. ಪಾಪ ಪೊಲಾರ್ಡ್ ನೋಡಿದರೆ ಶುಕ್ರವಾರ (ಜನವರಿ 29) ತಾನೆ ಟಿ10 ಲೀಗ್‌ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ಪ್ರತಿನಿಧಿಸಿ ಟೀಮ್ ಅಬುಧಾಬಿ ವಿರುದ್ಧ 6 ವಿಕೆಟ್ ಗೆಲುವನ್ನಾಚರಿಸಿದ್ದರು!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications