Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟೋಯ್ನಿಸ್ ಪೆವಿಲಿಯನ್‌ಗಟ್ಟಿದ ಡು ಪ್ಲೆಸಿಸ್-ಶೋರೆ ಅದ್ಭುತ ಕ್ಯಾಚ್-ವಿಡಿಯೋ

Faf du Plessis boundary line antics help Dhruv Shorey complete Stoinis’ catch

ಬೆಂಗಳೂರು, ಏಪ್ರಿಲ್ 22: ಅಸಲಿಗೆ ಐಪಿಎಲ್ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಉತ್ತಮ ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿಯನ್ನು 161 ರನ್‌ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು.

ಆರ್‌ಸಿಬಿ ಇನ್ನಿಂಗ್ಸ್ ವೇಳೆ ರನ್ ಕದಿಯುವಿಕೆಗೆ ಬ್ರೇಕ್ ಬಿದ್ದಿದ್ದು, ವಿರಾಟ್ ಕೊಹ್ಲಿ (2.3 ಓವರ್‌), ಎಬಿ ಡಿ ವಿಲಿಯರ್ಸ್ (6.5 ಓವರ್‌) ವಿಕೆಟ್‌ಗಳು ಬೇಗನೆ ಉರುಳಿದ್ದರಿಂದ. ಇನ್ನು ತಂಡಕ್ಕೆ ಆಧಾರವಾಗಿ ನಿಲ್ಲಬೇಕಿದ್ದ ಮಾರ್ಕಸ್ ಸ್ಟೋಯ್ನಿಸ್ ಕೂಡ 16.3ನೇ ಓವರ್‌ಗೆ ನಿರ್ಗಮಿಸಿದರು. ಸಿಕ್ಸ್‌ ಎನಿಸಿಕೊಳ್ಳಲಿದ್ದ ಚೆಂಡನ್ನು ತಡೆದು ಸ್ಟೋಯ್ನಿಸ್ ಔಟ್ ಮಾಡಿದ್ದು ಫಾ ಡು ಪ್ಲೆಸಿಸ್ ಮತ್ತು ಧೃವ್ ಶೋರೆ.

ಇಮ್ರಾನ್ ತಾಹಿರ್ ಅವರ 16.3ನೇ ಓವರ್‌ನಲ್ಲಿ ಸ್ಟೋಯ್ನಿಸ್ ಬ್ಯಾಟ್ ತಾಗಿದ ಚೆಂಡು ಇನ್ನೇನು ಸಿಕ್ಸ್ ಲೈನ್ ದಾಟುವುದರಲ್ಲಿತ್ತು. ಆದರೆ ಚೆನ್ನೈ ತಂಡದಲ್ಲಿ ಫೀಲ್ಡಿಂಗ್‌ಗೆ ಹೆಸರಾದ ಡು ಪ್ಲೆಸಿಸ್ ಜಿಗಿದು ಅದ್ಭುತ ರೀತಿಯಲ್ಲಿ ಚೆಂಡನ್ನು ತಡೆದರು, ಹಿಡಿದರು.

ಚೆಂಡು ಸಿಕ್ಸ್ ಲೈನ್ ದಾಟುವುದನ್ನೇನೋ ಪ್ಲೆಸಿಸ್ ತಡೆದಿದ್ದರು. ಆದರೆ ಅವರಿಂದ ಬಾಡಿ ಬ್ಯಾಲನ್ಸ್ ಮಾಡಲಾಗಲಿಲ್ಲ. ತಾನು ಸಿಕ್ಸ್‌ ಲೈನ್ ಒಳಗೆ ಬೀಳೋದಕ್ಕೂ ಮುನ್ನ ಚೆಂಡನ್ನು ಶೋರೆ ಕೈಗೆ ಹಸ್ತಾಂತರಿಸಿದರು. ಸ್ಟೋಯ್ನಿಸ್ ಔಟಾದರು. ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

Story first published: Monday, April 22, 2019, 17:54 [IST]
Other articles published on Apr 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+