ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ ಹೊಡೆದು ಮೈದಾನದಲ್ಲೇ ಕುಸಿದು ಬಿದ್ದ ಡು ಪ್ಲೆಸಿಸ್

ಕೊರೊನಾವೈರಸ್ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ 2021ರ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಜೂನ್ 9ರಿಂದ ಯುಎಇಯಲ್ಲಿ ಪುನರಾರಂಭವಾಗಿದೆ. ಈ ಟೂರ್ನಿಯಲ್ಲಿ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭಾಗವಹಿಸಿದ್ದು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಟವನ್ನು ಆಡುತ್ತಿದ್ದಾರೆ.
UEFA Euro 2020: ಆಟದ ಮಧ್ಯೆಯೇ ಕುಸಿದ ಆಟಗಾರ, ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯ ಅಮಾನತು!
ಶನಿವಾರ ಅಬುದಾಬಿಯಲ್ಲಿ ನಡೆದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಜಲ್ಮಿ ತಂಡಗಳ ನಡುವಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಫಾಫ್ ಡು ಪ್ಲೆಸಿಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ಹೌದು ಫೀಲ್ಡಿಂಗ್ ಮಾಡುವ ವೇಳೆ ಏಳನೇ ಓವರ್‌ನಲ್ಲಿ ಬೌಂಡರಿಯೊಂದನ್ನು ತಡೆಯುವ ಪ್ರಯತ್ನದಲ್ಲಿದ್ದ ಫಾಫ್ ಡು ಪ್ಲೆಸಿಸ್ ತಲೆಗೆ ತಂಡದ ಸಹ ಆಟಗಾರ ಮೊಹಮ್ಮದ್ ಹಸ್ನೈನ್ ಕಾಲು ಬಲವಾಗಿ ಬಡಿದಿದೆ. ಇಬ್ಬರೂ ಒಟ್ಟಿಗೆ ಬೌಂಡರಿಯನ್ನು ತಡೆಯಲು ಮುಂದಾದ ಕಾರಣ ಈ ಅವಘಡ ಸಂಭವಿಸಿದ್ದು ಡು ಪ್ಲೆಸಿಸ್ ತೀವ್ರ ಗಾಯಕ್ಕೊಳಗಾಗಿರುವುದು ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿದರೆ ತಿಳಿಯುತ್ತದೆ.
ಘಟನೆ ಸಂಭವಿಸಿದ ಕೂಡಲೇ ಫಾಫ್ ಡು ಪ್ಲೆಸಿಸ್ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ. ಹೀಗೆ ಗಾಯಕ್ಕೊಳಗಾದ ಫಾಫ್ ಡು ಪ್ಲೆಸಿಸ್ ಪಂದ್ಯದಿಂದ ಹೊರಗುಳಿದರು ಹಾಗೂ ತಕ್ಷಣವೇ ಅವರನ್ನು ಅಬುಧಾಬಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications