UEFA Euro 2020: ಆಟದ ಮಧ್ಯೆಯೇ ಕುಸಿದ ಆಟಗಾರ, ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯ ಅಮಾನತು!

ಕೋಪನ್ ಹ್ಯಾಗನ್: ಡೆನ್ಮಾರ್ಕ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಆಟದ ಮಧ್ಯೆಯೇ ಕುಸಿದು ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ. ಜೂನ್ 12ರ ಶನಿವಾರ ನಡೆಯುತ್ತಿದ್ದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಸಿಎ) ಯೂರೋ 2020 ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ.
ಕೋಪನ್ ಹ್ಯಾಗನ್ ನಲ್ಲಿರುವ ಪಾರ್ಕನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಯೂರೋ 2020 ಮೂರನೇ ಪಂದ್ಯದಲ್ಲಿ ಡೆನ್ಮಾರ್ಕ್ ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಶನಿವಾರ ನಡೆಯಲಿದ್ದ ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯವನ್ನು ಅಮಾನತುಗೊಳಿಸಲಾಗಿದೆ.
ಪಂದ್ಯದ ಪ್ರಥಮಾರ್ಧಕ್ಕೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ 29ರ ಹರೆಯದ ಕ್ರಿಶ್ಚಿಯನ್ ಮೈದಾನದಲ್ಲೇ ಕುಸಿದುಬಿದ್ದರು. ಫಿನ್‌ಲ್ಯಾಂಡ್ ಹಾಫ್ ಭಾಗದಲ್ಲಿ ಕುಸಿದಿದ್ದ ಕ್ರಿಶ್ಚಿಯನ್‌ಗೆ ವೈದ್ಯಕೀಯ ಉಪಚಾರ ನೀಡಿ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಸಿದು ಬಿದ್ದ ಕ್ರಿಶ್ಚಿಯನ್ ಚೂರೂ ಅಲುಗಾಡುತ್ತಿರಲಿಲ್ಲ. ಸ್ಟೇಡಿಯಂನಲ್ಲಿದ್ದು ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ಅಭಿಮಾನಿಗಳು ಈ ದೃಶ್ಯ ನೋಡಿ ಆಘಾತಗೊಂಡರು. ಕ್ರಿಶ್ಚಿನ್ ಬೇಗ ಗುಣಮುಖರಾಗಲೆಂದು ಕ್ರೀಡಾ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿ ಎರಿಕ್ಸೆನ್‌ಗೆ ಪ್ರಜ್ಞೆ ಬಂದಿದ್ದು, ಮುಂದಿನ ಚಿಕಿತ್ಸೆ ನೀಡಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications