Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನಕ್ಕೆ ಬಿಗ್ ಶಾಕ್; ಓಪನರ್ ಹೊರಗೆ

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನ ತಂಡಕ್ಕೆ ಆರಂಭ ಉತ್ತಮವಾಗಿಲ್ಲ. ಪಾಕಿಸ್ತಾನ ತಂಡ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60ರ ರನ್‌ಗಳ ಹೀನಾಯ ಸೋಲು ಕಂಡಿದೆ. ಈಗ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಕಹಿ ಸುದ್ದಿ ಬಂದಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಗಾಯಗೊಂಡಿದ್ದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಫಖರ್ ಜಮಾನ್ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಫಖರ್ ಜಮಾನ್ ದುಬೈಗೆ ಹೋಗುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ಇಂತಹ ಸಂದರ್ಭದಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಫಖರ್ ಜಮಾನ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವುದು ಪಾಕಿಸ್ತಾಕ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಫಖರ್ ಅನುಪಸ್ಥಿಯಿಂದ ಪಾಕಿಸ್ತಾನ ಬ್ಯಾಟಿಂಗ್ ವಿಭಾಗ ಮತ್ತಷ್ಟು ದುರ್ಬಲವಾಗಿ ಕಾಣಿಸಿಕೊಳ್ಳಲಿದೆ.

Fakhar Zaman ruled out of Champions Trophy opener against New Zealand

ಗಾಯಗೊಂಡಿದ್ದೇಗೆ?

ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಯಿತು. ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಫಖರ್ ಜಮಾನ್ ಫೀಲ್ಡಿಂಗ್ ಮಾಡುವಾಗ ಬೌಂಡರಿ ಗೆರೆ ಬಳಿ ಹೋಗುತ್ತಿದ್ದ ಚೆಂಡನ್ನು ತಡೆಯಲು ಹೋಗಿ ಗಾಯಗೊಂಡರು. ಬಳಿಕ ಅವರು ಸ್ನಾಯು ಸೆಳೆತದಿಂದ ಮೈದಾನದಿಂದ ಹೊರ ನಡೆದರು. ಇದಾದ ನಂತರ ಅವರ ಸ್ಕ್ಯಾನ್ ವರದಿಗಳು ಹೊರ ಬಂದಿದ್ದು, ಬೇಗನೆ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಈ ಕಾರಣದಿಂದ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.

ಫಖರ್ ಜಮಾನ್ ಗಾಯಗೊಂಡ ಕಾರಣ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ನಿಯಮಿತ ಆರಂಭಿಕ ಸ್ಥಾನಕ್ಕೆ ಬರಲಿಲ್ಲ. ಬಾಬರ್ ಅಜಮ್ ಅವರಿಂದಿಗೆ ಸೌದ್ ಶಕೀಲ್ ಇನ್ನಿಂಗ್ಸ್ ಆರಂಭಿಸಿದರಯ. ಫಖರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರೂ, ಬಿಗ್ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಲಿಲ್ಲ. ಅವರು 41 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 24 ರನ್ ಗಳಿಸಿ ಔಟಾದರು.

ಬದಲಿ ಆಟಗಾರ ಯಾರು?

ಫಖರ್ ಜಮಾನ್ ಗಾಯಗೊಂಡು ಹೊರಗುಳಿದಿರುವುದರಿಂದ ಬದಲಿ ಆಟಗಾರ ಯಾರು ಎಂಬ ಪ್ರಶ್ನೆ ಎದುರಾಗಿದೆ. ವರದಿಗಳ ಪ್ರಕಾರ, ಪಾಕಿಸ್ತಾನ ಪರ ಇದುವರೆಗೆ ಒಂದೂ ಏಕದಿನ ಪಂದ್ಯವನ್ನಾಡದ ಇಮಾಮ್-ಉಲ್-ಹಕ್ ಅವರು ಫಖರ್ ಜಮಾನ್ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇಮಾಮ್ 90 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

Story first published: Thursday, February 20, 2025, 13:47 [IST]
Other articles published on Feb 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+